Select Your Language

Notifications

webdunia
webdunia
webdunia
webdunia

ಮತ್ತೆ ಪೆಟ್ರೋಲ್ ಬೆಲೆ ದುಬಾರಿ!?

ಮತ್ತೆ ಪೆಟ್ರೋಲ್ ಬೆಲೆ ದುಬಾರಿ!?
ನವದೆಹಲಿ , ಗುರುವಾರ, 27 ಜನವರಿ 2022 (15:08 IST)
ನವದೆಹಲಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರೀ ಏರಿಕೆ ಕಂಡಿದೆ.

7 ವರ್ಷಗಳ ಬಳಿಕ 1 ಬ್ಯಾರೆಲ್ಗೆ ತೈಲದ ದರ 90 ಡಾಲರ್ (6,765 ರೂ.) ತಲುಪಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಉಕ್ರೇನ್ ಮೇಲೆ ರಷ್ಯಾ ಯುದ್ಧದ ಕಾರ್ಮೋಡ ಆವರಿಸಿರುವ ಪರಿಣಾಮ ಕಚ್ಚಾತೈಲ ದರ ಏರಿಕೆ ಕಂಡಿದೆ. 90 ಡಾಲರ್ ಗಡಿ ದಾಟಿರುವ ಕಚ್ಚಾತೈಲ ಬೆಲೆ 125 ಡಾಲರ್ಗೆ ಏರಿಕೆಯಾಗಬಹುದು ಎಂದು ವರದಿಯಾಗಿದೆ.

ಕಳೆದ ಒಂದು ವಾರಗಳ ಹಿಂದೆ ಬ್ಯಾರಲ್ಗೆ 80 ಡಾಲರ್ (6,013 ರೂ.) ಇದ್ದ ಬೆಲೆ ಇದೀಗ 90 ಡಾಲರ್ಗೆ ಬಂದು ತಲುಪಿದೆ. ಇದಲ್ಲದೆ 2014ರ ಬಳಿಕ ಇದೀಗ ಮತ್ತೆ ರಷ್ಯಾದಲ್ಲಿ ಯುದ್ಧದ ಸನ್ನಿವೇಶ ಆರಂಭಗೊಂಡಿದೆ ಹಾಗಾಗಿ ತೈಲ ಹೊರೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಏರ್ ಇಂಡಿಯಾವನ್ನು ಟಾಟಾ ಸನ್ಸ್‌ಗೆ ಮಾರಾಟ