Select Your Language

Notifications

webdunia
webdunia
webdunia
webdunia

ವಾಹನ ಸವಾರರಿಗೊಂದು ಗುಡ್ ನ್ಯೂಸ್!

ವಾಹನ ಸವಾರರಿಗೊಂದು ಗುಡ್ ನ್ಯೂಸ್!
ನವದೆಹಲಿ , ಬುಧವಾರ, 14 ಜುಲೈ 2021 (19:15 IST)
ನವದೆಹಲಿ(ಜು.14): ಈಗಾಗಲೇ ಪ್ರತೀ ನಿತ್ಯದ ದರ ಪರಿಷ್ಕರಣೆಯಿಂದ ಭಾರೀ ಪ್ರಮಾಣದ ಏರಿಕೆ ಕಂಡು ಶತಕ ದಾಟಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಈ ತಿಂಗಳ ಅಂತ್ಯಕ್ಕೆ ಕೊಂಚ ಪ್ರಮಾಣ ಇಳಿಕೆಯಾಗಲಿದೆ ಎಂದು ವರದಿಗಳು ತಿಳಿಸಿವೆ.

* ಕಚ್ಚಾತೈಲ ಬೆಲೆ ಇಳಿಕೆ ಹಿನ್ನೆಲೆ
* ತಿಂಗಳಾಂತ್ಯಕ್ಕೆ ಪೆಟ್ರೋಲ್, ಡೀಸೆಲ್ ದರ ಕೊಂಚ ಇಳಿಕೆ?
* ಈಗಾಗಲೇ ಪ್ರತೀ ನಿತ್ಯದ ದರ ಪರಿಷ್ಕರಣೆಯಿಂದ ಭಾರೀ ಪ್ರಮಾಣದ ಏರಿಕೆ

ಆದರೆ ಭಾರೀ ಪ್ರಮಾಣದ ದರವೇನು ಕಡಿಮೆಯಾಗಲ್ಲ. ಕೊಂಚವೇ ಕೊಂಚ ಬೆಲೆ ಮಾತ್ರ ಕಡಿಮೆಯಾಗಲಿದೆ ಎಂದು ಮೂಲಗಳು ಹೇಳಿವೆ.
ಒಂದು ಹಂತದಲ್ಲಿ ಪ್ರತೀ ಬ್ಯಾರೆಲ್ನ ಬ್ರೆಂಟ್ ಕಚ್ಚಾತೈಲ ದರವು 77 ಡಾಲರ್ಗೆ ಜಿಗಿದಿತ್ತು. ಆದರೆ ಅದೀಗ 75 ಡಾಲರ್ಗೆ ಇಳಿಕೆಯಾಗಿದ್ದು, ಈ ದರದಲ್ಲೇ ಸ್ಥಿರತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಬೆಂಗಳೂರಿನಲ್ಲಿ ಹೀಗಿದೆ ಇಂದಿನ ದರ
ಪೆಟ್ರೋಲ್ ಒಂದು ಲೀಟರ್ ಬೆಲೆ:  104.58 ರೂ
ಡೀಸೆಲ್ ಒಂದು ಲೀಟರ್ ಬೆಲೆ: 95.09 ರೂ


Share this Story:

Follow Webdunia kannada

ಮುಂದಿನ ಸುದ್ದಿ

ಲಸಿಕಾ ಅಭಿಯಾನ; 38.76 ಕೋಟಿ ಡೋಸ್ ನೀಡಿ ದಾಖಲೆ ಬರೆದ ಭಾರತ!