Select Your Language

Notifications

webdunia
webdunia
webdunia
webdunia

ಮಕ್ಕಳ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ!

ಮಕ್ಕಳ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ!
ನವದೆಹಲಿ , ಮಂಗಳವಾರ, 26 ಏಪ್ರಿಲ್ 2022 (15:15 IST)
ನವದೆಹಲಿ : ಕೊರೋನಾ ವೈರಸ್ನಿಂದ ಮಕ್ಕಳನ್ನು ರಕ್ಷಿಸಲು ಹೊಸ ಅಸ್ತ್ರವೊಂದು ಕಂಡು ಹಿಡಿಯಲಾಗಿದೆ.

ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ 6-12 ವರ್ಷ ವಯಸ್ಸಿನ ಮಕ್ಕಳಿಗೆ ಕೋವ್ಯಾಕ್ಸಿನ್ನ ತುರ್ತು ಬಳಕೆಗೆ ಅನುಮತಿ ನೀಡಿದೆ ಎಂದು ವರದಿಯಾಗಿದೆ.

ಶುಕ್ರವಾರದಂದು, ವಿಷಯ ತಜ್ಞರ ಸಮಿತಿಯು ಈ ವಯಸ್ಸಿನ ಮಕ್ಕಳಿಗೆ ಕೋವ್ಯಾಕ್ಸಿನ್ ಅನ್ನು ಶಿಫಾರಸು ಮಾಡಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದೆ.

ವಯಸ್ಕರ ವ್ಯಾಕ್ಸಿನೇಷನ್ನಲ್ಲಿ ಕೋವಿಶೀಲ್ಡ್ ಜೊತೆಗೆ ಕೋವಾಕ್ಸಿನ್ ಅನ್ನು ಸಹ ಬಳಸಲಾಗಿದೆ. ಪ್ರಸ್ತುತ ಈ ಲಸಿಕೆಯನ್ನು 15 ರಿಂದ 18 ವರ್ಷದ ಮಕ್ಕಳಿಗೆ ನೀಡಲಾಗುತ್ತಿದೆ. ಗುರುವಾರ ನಡೆದ ಸಭೆಯಲ್ಲಿ ಭಾರತ್ ಬಯೋಟೆಕ್ನ ಅರ್ಜಿಯನ್ನು ಎಸ್ಇಸಿ ಪರಿಗಣಿಸಿದೆ. ಆದಾಗ್ಯೂ, ಶುಕ್ರವಾರ ಕಂಪನಿಯು ನೀಡಿದ ಡೇಟಾದ ನಂತರ, ತಜ್ಞರು ಹೆಚ್ಚುವರಿ ಮಾಹಿತಿಯನ್ನು ಕೇಳಿದ್ದಾರೆ.

ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಮತ್ತೊಮ್ಮೆ ಮಕ್ಕಳಿಗೆ ಲಸಿಕೆ ನೀಡುವತ್ತ ಹೆಚ್ಚಿನ ಗಮನ ಹರಿಸಲಾಗಿದೆ. ಗುರುವಾರ, Sಇಅ 5 ರಿಂದ 12 ವಯಸ್ಸಿನ ಮಕ್ಕಳಿಗೆ ಬಯೋಲಾಜಿಕಲ್ಸ್ ಇ's ಅoಡಿbivಚಿx ಅನ್ನು ಬಳಸಲು ಶಿಫಾರಸು ಮಾಡಿದೆ.

ಪ್ರಸ್ತುತ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ನೀಡಲಾಗುತ್ತಿದೆ. ಭಾರತದಲ್ಲಿ, 15-18 ವರ್ಷ ವಯಸ್ಸಿನವರಿಗೆ ಲಸಿಕೆಯನ್ನು ಜನವರಿಯಿಂದ ಪ್ರಾರಂಭಿಸಲಾಯಿತು. ಮಾರ್ಚ್ನಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹಸಿರು ನಿಶಾನೆ ತೋರಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಯಲ್ಲಿ ಧರ್ಮದ ಬುಕ್ ಓದಿ ಅಂತ ಹೇಳುವ ಹಾಗಿಲ್ಲ