Select Your Language

Notifications

webdunia
webdunia
webdunia
webdunia

ಕೋವಿಶೀಲ್ಡ್ ಉತ್ಪಾದನೆ ಸ್ಥಗಿತ !

ಕೋವಿಶೀಲ್ಡ್ ಉತ್ಪಾದನೆ ಸ್ಥಗಿತ !
ನವದೆಹಲಿ , ಮಂಗಳವಾರ, 26 ಏಪ್ರಿಲ್ 2022 (07:11 IST)
ಕೋವಿಶೀಲ್ಡ್ ಲಸಿಕೆ ತಯಾರಿಸುವ ಇಲ್ಲಿನ ಸೀರಂ ಇನ್ಸ್ಟಿಟ್ಯೂಟ್ ತನ್ನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.
 
‘ಭಾರತ ವಿದೇಶಗಳಿಗೆ ಕೋವಿಡ್ ಲಸಿಕೆ ಪೂರೈಕೆಯನ್ನು ನಿಲ್ಲಿಸಿದ ಕಾರಣ, ಸೀರಂ ಇನ್ಸ್ಟಿಟ್ಯೂಟ್ ಬಳಿ 20 ಕೋಟಿ ಡೋಸ್ ಕೊರೋನಾ ಲಸಿಕೆಯ ದಾಸ್ತಾನು ಮಾರಾಟವಾಗದೇ ಹಾಗೇ ಉಳಿಸಿದೆ.

ಹೀಗಾಗಿ ಕಂಪನಿಯು ಹೊಸದಾಗಿ ಲಸಿಕೆ ಉತ್ಪಾದನೆಯನ್ನು ಡಿಸೆಂಬರ್ನಲ್ಲೇ ನಿಲ್ಲಿಸಿದೆ’ ಸೀರಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್ ಪೂನಾವಾಲ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಈಗಾಗಲೇ ನಮ್ಮ ಬಳಿ 20 ಕೋಟಿ ಡೋಸ್ ಲಸಿಕೆ ದಾಸ್ತಾನಿದೆ. ಲಭ್ಯವಿರುವ ಡೋಸ್ ಅವಧಿ ಮೀರುವ ಆತಂಕ ಎದುರಾಗಿದೆ. ಹೀಗಾಗಿ ಲಸಿಕೆಯನ್ನು ತೆಗೆದುಕೊಳ್ಳಲು ಬಯಸುವವರಿಗೆ ಉಚಿತವಾಗಿ ನೀಡಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿಗೆ ಲತಾ ಮಂಗೇಶ್ವರ್ ಪ್ರಶಸ್ತಿ