Select Your Language

Notifications

webdunia
webdunia
webdunia
Wednesday, 2 April 2025
webdunia

3 ನೇ ಡೋಸ್ ಲಸಿಕೆ ಕಡ್ಡಾಯ

ಓಮಿಕ್ರಾನ್
ಬೆಂಗಳೂರು , ಮಂಗಳವಾರ, 26 ಏಪ್ರಿಲ್ 2022 (09:51 IST)
3 ನೇ ಡೋಸ್ ಉಚಿತವಾಗಿ ನೀಡುವ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ಕೊಡಲಾಗುತ್ತಿದೆ.

12 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಉಚಿತ ಇದೆ. ಹೀಗಾಗಿ ಈ ವಯೋಮಾನದವರು ಲಸಿಕೆ ಶೀಘ್ರವೇ ಹಾಕಿಸಿಕೊಳ್ಳಬೇಕು. ಎರಡು ಡೋಸ್ ಲಸಿಕೆ ಹಾಕಿಸಿ 9 ತಿಂಗಳು ಆದವರು 3ನೇ ಡೋಸ್ ಪಡೆಯಬೇಕು. ಉಚಿತ ಲಸಿಕೆ ನಿಡೋ ಬಗ್ಗೆ ನಾಳೆಯ ಸಭೆಯಲ್ಲಿ ಪ್ರಧಾನಿಗಳು ಏನ್ ಸೂಚನೆ ಕೊಡ್ತಾರೆ ನೋಡ್ತೀವಿ.

ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ಮಾಡುತ್ತೆ. ಆದ್ರೆ ಯುವಕರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗಬೇಕು ಎಂದರು. ಐಐಟಿ ಕಾನ್ಪುರದ ತಜ್ಞರು ಜೂನ್ ಅಂತ್ಯದಲ್ಲಿ ಕೊರೊನಾ 4 ನೇ ಅಲೆ ಬರಬಹುದು ಅಂತ ಎಚ್ಚರಿಕೆ ಕೊಟ್ಟಿದ್ದಾರೆ.

3 ಅಲೆಗಳಲ್ಲಿ ಇವ್ರು ಕೊಟ್ಟ ವರದಿ ನಿಜವಾಗಿದೆ. ಹೀಗಾಗಿ ಜೂನ್ ವೇಳೆಗೆ ಅಥವಾ ಒಂದು ತಿಂಗಳ ಮುಂಚೆಯೇ 4ನೇ ಅಲೆ ಬರುವ ಸಾಧ್ಯತೆ ಇದೆ. ಜೂನ್ ನಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್- ಅಕ್ಟೋಬರ್ವರೆಗೂ 4ನೇ ಅಲೆ ಇರಬಹುದು ಎಂದು ತಿಳಿಸಿದರು. 

ಕೋವಿಡ್ ನಿಂದ ಶಾಲೆಗಳ ಮೇಲೆ ಪರಿಣಾಮ ವಿಚಾರ ಸಂಬಂಧ ಮಾತನಾಡಿ, ಕೋವಿಡ್ ಬಂದು ಎರಡು ವರ್ಷ ಆಗಿದೆ. ಹೀಗಾಗಿ ನಾವು ಕೂಡಾ ಕೋವಿಡ್ ಜೊತೆ ಬದುಕಲು ಕಲಿಯಬೇಕು. ಮಾಸ್ಕ್, ಲಸಿಕಾಕರಣದ ಬಗ್ಗೆ ಜನರು ನಿಗಾವಹಿಸಬೇಕು.

ಓಮಿಕ್ರಾನ್ ರೂಪಾಂತರ ಅಂತ ತಳಿ ಇದು ಅಂತ ಹೇಳಲಾಗ್ತಿದೆ. ಈ ಬಗ್ಗೆ ಲ್ಯಾಬ್ ವರದಿ ಕಳಿಸಲಾಗಿದೆ. ಎರಡು ಮೂರು ದಿನಗಳಲ್ಲಿ ವರದಿ ಬರಬಹುದು. ರಾಜ್ಯದಲ್ಲಿ 4 ನೇ ಅಲೆ ಬಂದಿದೆ ಅಂತ ಹೇಳಲು ಸಾಧ್ಯವಿಲ್ಲ. ಕೇಸ್ ನ ಪ್ರಮಾಣ ಇನ್ನು ಕಡಿಮೆ ಇದೆ. ಹೀಗಾಗಿ ಈಗಲೇ 4 ನೇ ಅಲೆ ರಾಜ್ಯಕ್ಕೆ ಬಂದಿದೆ ಅಂತ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗುವುದಾಗಿ ನಂಬಿಸಿ ಯುವತಿಯ ಅತ್ಯಾಚಾರ