Select Your Language

Notifications

webdunia
webdunia
webdunia
webdunia

ಶಾಲೆಯಲ್ಲಿ ಧರ್ಮದ ಬುಕ್ ಓದಿ ಅಂತ ಹೇಳುವ ಹಾಗಿಲ್ಲ

ಶಾಲೆಯಲ್ಲಿ ಧರ್ಮದ ಬುಕ್ ಓದಿ ಅಂತ ಹೇಳುವ ಹಾಗಿಲ್ಲ
ಬೆಂಗಳೂರು , ಮಂಗಳವಾರ, 26 ಏಪ್ರಿಲ್ 2022 (15:03 IST)
ಕ್ಲಾರೆನ್ಸ್ ಶಾಲೆ ಬೈಬಲ್ ಕಡ್ಡಾಯ ನಿಯಮವು ಸರ್ಕಾರದ ನಿಯಮಕ್ಕೆ ವಿರೋಧವಾಗಿದೆ.

ಈ ಶಾಲೆ ತಪ್ಪು ಮಾಡಿದೆ. ಶಿಕ್ಷಣ ಇಲಾಖೆ ಮೂಲಕ ನೋಟಿಸ್ ನೀಡಲಾಗಿದೆ. ಡಿಡಿಪಿಐ, ಬಿಇಓ ಮೂಲಕ ನೋಟಿಸ್ ನೀಡಲಾಗಿದೆ. ಆ ಶಾಲೆ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. 

ಸೋಮವಾರ ಶಾಲೆಗೆ ನೋಟಿಸ್ ನೀಡಲಾಗಿದೆ. ಕೂಡಲೇ ಲೀಗಲ್ ಪ್ರೊಸೆಸ್ ಮಾಡುತ್ತೇವೆ. ಸಿಬಿಎಸ್ಇ ಬೋರ್ಡ್ಗೂ ಈ ಬಗ್ಗೆ ಬರೆಯುತ್ತೇವೆ. ಯಾವ ಶಾಲೆಯೂ ಕೂಡಾ ಧರ್ಮದ ಬುಕ್ ಓದಿ ಅಂತ ಹೇಳುವ ಹಾಗೆ ಇಲ್ಲ. ರಾಜ್ಯ ಸರ್ಕಾರ ಎನ್ಓಸಿ ನೀಡುತ್ತದೆ. ಶಿಕ್ಷಣ ಇಲಾಖೆ ನಿಯಮದ ಅಡಿಯಲ್ಲಿ ಶಾಲೆ ಕೆಲಸ ನಿರ್ವಹಣೆ ಮಾಡಬೇಕು ಎಂದು ಹೇಳಿದರು. 

ಶಾಲೆ ತಪ್ಪು ಮಾಡಿದೆ. ಶಾಲೆ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ವೆಬ್ಸೈಟ್ನಲ್ಲಿ ಬೈಬಲ್ ಕಡ್ಡಾಯ ಎಂದು ಹಾಕಿದ್ದಾರೆ. ಯಾವುದೇ ಶಾಲೆಗಳಲ್ಲಿ ಇಂತಹ ಬೈಬಲ್ ಭೋದನೆ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ. ಎಲ್ಲಾ ಶಾಲೆಗಳು ಎಜುಕೇಶನ್ ಆಕ್ಟ್ ಪಾಲನೆ ಮಾಡಬೇಕು.

ಲೀಗಲ್ ಆಕ್ಷನ್ ತೆಗೆದುಕೊಂಡು ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಶಾಲೆಯಲ್ಲಿ ಇಂತಹ ತಪ್ಪು ಆದರೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಬಿಇಓಗಳಿಗೆ ಈ ಬಗ್ಗೆ ವರದಿ ನೀಡಲು ಸೂಚನೆ ನೀಡುತ್ತೇವೆ ಎಂದರು.

ನೈತಿಕ ಶಿಕ್ಷಣದಲ್ಲಿ ಭಗವದ್ಗೀತೆ ತರುತ್ತೇವೆ ಅಂದಾಗ ಜಾತ್ಯಾತೀತರು, ರಾಜಕೀಯ ಪಕ್ಷದ ನಾಯಕರು ಭಗವದ್ಗೀತೆ ವಿರುದ್ಧ ಮಾತಾಡಿದರು. ಈಗ ಯಾಕೆ ಯಾರು ಮಾತಾಡುತ್ತಿಲ್ಲ.

ಕಾಂಗ್ರೆಸ್, ಜೆಡಿಎಸ್ ಅವರು ಈಗ ಎಲ್ಲಿ ಹೋದ್ರು. ಬುದ್ಧಿ ಜೀವಿಗಳು ಈಗ ಎಲ್ಲಿ ಹೋದರು. ಟಿಪ್ಪು ಬಗ್ಗೆ ಬಂದರೆ ಮಾತಾಡ್ತಾರೆ. ಈಗ ಯಾಕೆ ಯಾರು ಮಾತಾಡುತ್ತಿಲ್ಲ. ಶಾಲೆ ಮಾಡ್ತಿರೋದು ತಪ್ಪು ಅಂತ ಯಾಕೆ ಕಾಂಗ್ರೆಸ್ ಹೇಳುತ್ತಿಲ್ಲ ಎಂದು ಕಿಡಿಕಾರಿದರು.


Share this Story:

Follow Webdunia kannada

ಮುಂದಿನ ಸುದ್ದಿ

ವಿಚಾರಣೆ : ಬಿಬಿಎಂಪಿ ಚುನಾವಣೆ ಮತ್ತಷ್ಟು ವಿಳಂಬ