Select Your Language

Notifications

webdunia
webdunia
webdunia
webdunia

ಸಚಿವ ಉಮೇಶ್ ಕತ್ತಿ ನಿಧನ

webdunia
ಬೆಂಗಳೂರು , ಬುಧವಾರ, 7 ಸೆಪ್ಟಂಬರ್ 2022 (08:23 IST)
ಬೆಂಗಳೂರು : ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದ ಸಚಿವ ಉಮೇಶ್ ಕತ್ತಿ (61) ಅವರಿಂದು ವಿಧಿವಶರಾಗಿದ್ದಾರೆ.
 
ಇಲ್ಲಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿದ್ದಾಗ ಅವರಿಗೆ ರಾತ್ರಿ 10 ಗಂಟೆ ಸುಮಾರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

1961 ಮಾರ್ಚ್ 14ರಂದು ಬೆಳಗಾವಿ ಜಿಲ್ಲೆಯಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ ಕತ್ತಿ, ರಾಜಕಾರಣಿ, ಕೃಷಿಕ, ಉದ್ಯಮಿ ಆಗಿಯೂ ಸಾರ್ಥಕ ಜೀವನ ನಡೆಸಿದ್ದಾರೆ.

ಉಮೇಶ್ ಕತ್ತಿ ಅವರಿಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಉಮೇಶ್ ಕತ್ತಿ ನಿಧನರಾದ ವಿಷಯ ತಿಳಿಯುತ್ತಿದ್ದಂತೆ ಸಿಎಂ ಬೊಮ್ಮಾಯಿ ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಮೊದಲ ಕೋವಿಡ್ ಲಸಿಕೆಗೆ ಅನುಮೋದನೆ