Publish Date: Thu, 18 Aug 2022 (20:52 IST)
Updated Date: Thu, 18 Aug 2022 (20:53 IST)
ನವದೆಹಲಿ: ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿದ್ದ ನಟ ರಾಜು ಶ್ರೀವಾಸ್ತವ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಅವರಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಚಿಕಿತ್ಸೆಗೊಳಪಡಿಸಲಾಗುತ್ತಿದೆ. ಹಾಗಿದ್ದರೂ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬರುತ್ತಿಲ್ಲ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ನಟನ ಮೆದುಳಿನ ಭಾಗದಲ್ಲಿ ಊತ ಕಂಡುಬರುತ್ತಿದೆ. ಇದೀಗ ವೈದ್ಯರು ಅವರು ಚೇತರಿಸಿಕೊಳ್ಳುವ ಭರವಸೆ ಕಳೆದುಕೊಂಡಿದ್ದಾರೆ.
ಹೀಗಿದ್ದರೂ ಕುಟುಂಬಸ್ಥರು ಮಾತ್ರ ಭರವಸೆ ಕಳೆದುಕೊಂಡಿಲ್ಲ. ರಾಜು ಶ್ರೀವಾಸ್ತವ ಫೈಟರ್, ಅವರು ಬದುಕಿ ಬರುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ.