Select Your Language

Notifications

webdunia
webdunia
webdunia
webdunia

ಉಮೇಶ್ ಕತ್ತಿಯನ್ನ ನಿಮ್ಹಾನ್ಸ್ ಸೇರಿಸ್ತಿನಿ : ವಾಟಾಳ್ ನಾಗರಾಜ್

ಉಮೇಶ್ ಕತ್ತಿಯನ್ನ ನಿಮ್ಹಾನ್ಸ್ ಸೇರಿಸ್ತಿನಿ : ವಾಟಾಳ್ ನಾಗರಾಜ್
ಬೆಂಗಳೂರು , ಬುಧವಾರ, 27 ಜುಲೈ 2022 (09:43 IST)
ಬೆಂಗಳೂರು : ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿರುವ ಸಚಿವ ಉಮೇಶ್ ಕತ್ತಿ ವಿರುದ್ಧ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.

ನಾನು ಸಿಎಂ ಆಗಿದ್ದರೆ ಉಮೇಶ್ ಕತ್ತಿಯನ್ನ ನಿಮ್ಹಾನ್ಸ್ಗೆ ಸೇರಿಸುತ್ತಿದ್ದೆ ಅಂತ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನೇ ಮುಖ್ಯಮಂತ್ರಿ ಆಗಿದ್ರೆ ಉಮೇಶ್ ಕತ್ತಿಯನ್ನ ನಿಮ್ಹಾನ್ಸ್ ಸೇರಿಸುತ್ತಿದ್ದೆ. ಉಮೇಶ್ ಕತ್ತಿಗೆ ಬುದ್ಧಿ ಇಲ್ಲ. ಕರ್ನಾಟಕದಲ್ಲಿ ಇರೋದ್ರಿಂದ ಅವರು ರಾಜಕಾರಣಿ ಆಗಿ ಉಳಿದಿದ್ದಾರೆ.

ಇಲ್ಲದೇ ಹೋಗಿದ್ರೆ ಮರಾಠಿಗರು ಅವರನ್ನು ತಿಂದು ತೇಗುತ್ತಿದ್ದರು ಎಂದು ಕಿಡಿಕಾರಿದ್ದಾರೆ.  ಕರ್ನಾಟಕ ಯಾವುದೇ ಕಾರಣಕ್ಕೂ ಇಬ್ಭಾಗ ಆಗಬಾರದು. ಎಲ್ಲಾ ಭಾಗಗಳನ್ನ ಸರ್ಕಾರ ಅಭಿವೃದ್ಧಿ ಮಾಡಬೇಕು.

ಉತ್ತರ ಕರ್ನಾಟಕ, ಹೈದರಾಬಾದ್ ಕಲ್ಯಾಣ ಅಭಿವೃದ್ಧಿ ಆಗಬೇಕು. ಅದನ್ನ ಹೇಳಲಿ, ಅದು ಬಿಟ್ಟು ಬೇಜವಾಬ್ದಾರಿಯಾಗಿ ಯಾರು ಮಾತಾಡಬಾರದು ಅಂತಾ ಆಕ್ರೋಶ ಹೊರ ಹಾಕಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಲಾಕೃತಿ ಸ್ಥಾಪನೆ ಕರ್ನಾಟಕದ ಹೆಮ್ಮೆ: ಪ್ರಹ್ಲಾದ್ ಜೋಶಿ