Select Your Language

Notifications

webdunia
webdunia
webdunia
Wednesday, 9 April 2025
webdunia

ನಾಳೆಯ ಕರ್ನಾಟಕ ಬಂದ್ ವಾಪಸ್

ಕರ್ನಾಟಕ
ಬೆಂಗಳೂರು , ಗುರುವಾರ, 30 ಡಿಸೆಂಬರ್ 2021 (14:48 IST)
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮನವಿ ಮೇರೆಗೆ ನಾಳೆಯ ಕರ್ನಾಟಕ ಬಂದ್ ಅನ್ನು ಕೈ ಬಿಡಲಾಗಿದೆ.

ಸಿಎಂ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಗಳ ಮುಂದೆ ಮಾತನಾಡಿದ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಬಂದ್ ಬೇಡ ಎಂದು ಸಿಎಂ ಎರಡು ಬಾರಿ ಮಾತಾಡಿದರು.

ಎಂಇಎಸ್ ನಿಷೇಧ ಮಾಡುವ ಭರವಸೆ ನೀಡಿದರು. ಕಾನೂನು ಪ್ರಕಾರ ನಿಷೇಧ ಮಾಡಲು ಪ್ರಯತ್ನ ಮಾಡ್ತೀವಿ. ಬಂದ್ ಹಿಂಪಡೆಯಲು ಸಿಎಂ ಮನವಿ ಮಾಡಿದರು. ಅವರ ಮಾತಿಗೆ ಗೌರವ ಕೊಟ್ಟು ಬಂದ್ ವಾಪಸ್ ಪಡೆಯುವುದಾಗಿ ಹೇಳಿದರು.

ಇದೇ ವೇಳೆ ನನ್ನ ಜೀವನದಲ್ಲಿ ಈ ಬಾರಿಯ ಬಂದ್ ಮಾಡಲು ಹೋದಾಗ ತುಂಬಾ ಒತ್ತಡಗಳು ಬಂತು. ನಾಳೆ ರಾಜ್ಯದಲ್ಲಿ ಯಾವುದೇ ಬಂದ್ ಇರಲ್ಲ. ಎಂದಿನಂತೆ ನೀವು ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಬಸ್ ಸಂಚಾರ ಸೇರಿ ಎಲ್ಲವೂ ಎಂದಿನಂತೆ ಇರಲಿದೆ ಎಂದು ವಾಟಾಳ್ ಹೇಳಿದರು. 


Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿ ಕಾಂಗ್ರೆಸ್ ಗೆಲುತ್ತೆ ನೋಡಿ