Publish Date: Tue, 06 Sep 2022 (13:57 IST)
Updated Date: Tue, 06 Sep 2022 (17:01 IST)
ಲಕ್ನೋ : ಉತ್ತರ ಪ್ರದೇಶದ ಬಿಜೆಪಿ ಶಾಸಕ ಅರವಿಂದ್ ಗಿರಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅರವಿಂದ್ ಗಿರಿ ಅವರು ಲಖೀಂಪುರ ಖೇರಿ ಜಿಲ್ಲೆಯ ಗೋಲ ಗೋಕ್ರನಾಥ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದರು.
ಈ ಕುರಿತಂತೆ ಮಾಹಿತಿ ನೀಡಿರುವ ಲಖೀಂಪುರ ಖೇರಿ ಬಿಜೆಪಿ ಘಟಕ, ಹೃದಯಾಘಾತದ ಬಳಿಕ ಕೂಡಲೇ ಅರವಿಂದ್ ಗಿರಿ ಅವರನ್ನು ಚಿಕಿತ್ಸೆಗಾಗಿ ಲಕ್ನೋಗೆ ಕರೆದೊಯ್ಯುವಾಗ ಸೀತಾಪುರ ಬಳಿ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಅರವಿಂದ್ ಗಿರಿ ಅವರ ಸಾವಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಲಖಿಂಪುರ ಖೇರಿ ಜಿಲ್ಲೆಯ ಗೋಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಗಿರಿ ಅವರ ಸಾವು ದುರದೃಷ್ಟಕರವಾಗಿದೆ.