Publish Date: Thu, 12 Jan 2023 (14:08 IST)
Updated Date: Thu, 12 Jan 2023 (17:20 IST)
ಬೆಂಗಳೂರು : ನಾಗಾವರದ ಮೆಟ್ರೋ ಪಿಲ್ಲರ್ ದುರಂತ ಬೆಂಗಳೂರಿಗರಲ್ಲಿ ಆತಂಕ ಹೆಚ್ಚಿಸಿದೆ. ಬಿಎಂಆರ್ಸಿಎಲ್ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ತಾಯಿ ಮಗು ಸಾವು ಕರುಳು ಹಿಡುವಂತಿದೆ.
ಹೀಗಾಗಿ ಬಿಎಂಆರ್ಸಿಎಲ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಗೆ ಮನವಿ ಪತ್ರ ಕಳುಹಿಸಿದ್ದು, ಘಟನೆಗೆ ಕಾರಣ ಏನು ಎಂದು ತನಿಖೆ ಮಾಡಿ ವರದಿ ನೀಡುವಂತೆ ಮನವಿ ಮಾಡಿಕೊಂಡಿದೆ.
ಮೆಟ್ರೋ ಪಿಲ್ಲರ್ ದುರಂತದ ಬಳಿಕ ಸಾರ್ವಜನಿಕ ವಲಯದಲ್ಲಿ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ಕೇಳಿಬರುತ್ತಿದೆ. 40% ಕಮಿಷನ್ ಪರಿಣಾಮ ಹೀಗೆ ಆಗಿದೆ ಅಂತಾ ಆರೋಪ ಕೂಡ ವ್ಯಕ್ತವಾಗುತ್ತಿದೆ. ಈಗಾಗಲೇ ಕೆಳ ಹಂತದ ಅಧಿಕಾರಿ ವೆಂಕಟೇಶ್ ವಿರುದ್ಧ ಕ್ರಮ ಜರುಗಿಸಲಾಗಿದೆ.