Publish Date: Wed, 11 Jan 2023 (13:44 IST)
Updated Date: Wed, 11 Jan 2023 (15:18 IST)
ಬೆಂಗಳೂರು : ಬೆಂಗಳೂರಲ್ಲಿ ನಿನ್ನೆ ನಡೆದ ಮೆಟ್ರೋ ಪಿಲ್ಲರ್ ದುರಂತಕ್ಕೆ ಸಂಬಂಧಿಸಿದಂತೆ ಹೆಸರುಗಳನ್ನು ಎಫ್ಐಆರ್ ದಾಖಲಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಮೆಟ್ರೋ ದುರಂತಕ್ಕೆ ಸಂಬಂಧಿಸಂತೆ ನಿನ್ನೆ ಎಫ್ಐಆರ್ ಆಗಿತ್ತು. ಆದರೆ ಹೆಸರುಗಳನ್ನ ಉಲ್ಲೇಖಿಸಿ ಎಫ್ಐಆರ್ ರಿಜಿಸ್ಟರ್ ಆಗಿರಲಿಲ್ಲ.
ಎಫ್ಐಆರ್ನಲ್ಲಿ ಹೆಸರು ಉಲ್ಲೇಖ ಆಗಿದೆ, 8 ಮಂದಿ ಹೆಸರನ್ನ ಸೇರಿಸಿ ಎಫ್ಐಆರ್ ದಾಖಲಾಗಿದೆ ಎಂದು ಸ್ಪಷ್ಟಪಡಿಸಿದರು.