Select Your Language

Notifications

webdunia
webdunia
webdunia
webdunia

ಮಾವಿನ ಹಣ್ಣು ಅಕಾಲಿಕ ಮಳೆಗೆ ಬಾರದ ಫಸಲು, ಬೆಲೆ ಗಗನಕ್ಕೆ!

ಮಾವಿನ ಹಣ್ಣು ಅಕಾಲಿಕ ಮಳೆಗೆ ಬಾರದ ಫಸಲು, ಬೆಲೆ ಗಗನಕ್ಕೆ!
ಬೆಂಗಳೂರು , ಗುರುವಾರ, 31 ಮಾರ್ಚ್ 2022 (08:05 IST)
ಬೆಂಗಳೂರು : ಮಾವು ಹೆಸರು ಕೇಳಿದ್ರೇ ಸಾಕು ಎಂಥವರ ಬಾಯಲ್ಲೂ ನೀರು ಬರುತ್ತೆ.

ಯಾವಾಗ ಬೇಸಿಗೆ ಬರುತ್ತೋ ಅಂತಾ ತುಂಬಾ ಜನ ಕಾಯತ್ತಾ ಇರ್ತಾರೆ. ಆದರೆ ಈ ಬಾರಿ ಮಾವಿನ ರುಚಿ ಸವಿಬೇಕು ಅಂದ್ರೇ ಇನ್ನೂ ಸ್ಪಲ್ಪ ದಿನ ಕಾಯಲೇಬೇಕು. ಜೊತೆಗೆ ಮಾವು ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.

ಹೌದು. ಈ ಬಾರಿ ಮಾವಿನ ಹಣ್ಣಿನ ಮೇಲೆ ಪ್ರಕೃತಿ ಮುನಿಸಿಕೊಂಡಿದೆ. ನವೆಂಬರ್ ನಲ್ಲಾದ ಅಕಾಲಿಕ ಮಳೆಯಿಂದಾಗಿ ಮಾವಿನ ಫಸಲು ಕೈಗೆ ಬರುವುದು ಕೊಂಚ ವಿಳಂಬವಾಗಿದೆ.

ಪ್ರತಿ ವರ್ಷ ಮಾರ್ಚ್ ಕೊನೆ ಏಪ್ರಿಲ್ ಮೊದಲವಾರದಲ್ಲಿ ಮಾವು ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈ ಬಾರಿ ಏಪ್ರಿಲ್ಗೆ ಕೆಲವೇ ದಿನ ಬಾಕಿ ಇದ್ದರೂ ಮಾವು ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಏಪ್ರಿಲ್ ಅಂತ್ಯಕ್ಕೆ ಮಾವು ಸವಿಯಲು ಸಿಗಬಹುದು.

ಈ ಬಾರಿ ಕೇವಲ ಶೇ.40ರಿಂದ 50ರಷ್ಟು ಇಳುವರಿ ಬರಬಹುದು ಅಂತಾ ಮಾವು ನಿಗಮದ ತಾಂತ್ರಿಕ ಸಮಿತಿ ಅಂದಾಜಿಸಿದೆ.

ಈ ವರ್ಷ ಕರ್ನಾಟಕದಲ್ಲಿ ಕೇವಲ 8 ಲಕ್ಷ ಮೆಟ್ರಿಕ್ ಟನ್ ಮಾವು ಬರುವ ಅಂದಾಜಿದೆ. ಮೇ ತಿಂಗಳಲ್ಲಿ ಹೆಚ್ಚಿನ ಮಾವು ಬರಬಹುದು. ಮಾವಿನ ಇಳುವರಿ ಕಡಿಮೆಯಾಗುವುದರಿಂದ ಬೆಲೆ ಸಹ ಹೆಚ್ಚಾಗಲಿದೆ ಅಂತಾ ಹೇಳಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಡೆದಾಡೋ ದೇವರ ಜನ್ಮ ದಿನಾಚರಣೆ ಪೂರ್ತಿ ಅಪ್ಡೇಟ್