Select Your Language

Notifications

webdunia
webdunia
webdunia
webdunia

ಇಂಧನ ಬೆಲೆ ಏರಿಕೆಗೆ ಉತ್ತರ ಕೊಟ್ಟ ನಿರ್ಮಲಾ ಸೀತಾರಾಮನ್?

ಇಂಧನ ಬೆಲೆ ಏರಿಕೆಗೆ ಉತ್ತರ ಕೊಟ್ಟ ನಿರ್ಮಲಾ ಸೀತಾರಾಮನ್?
ನವದೆಹಲಿ , ಬುಧವಾರ, 30 ಮಾರ್ಚ್ 2022 (12:21 IST)
ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 137 ದಿನಗಳ ಕಾಲ ಪರಿಷ್ಕರಣೆಯಾಗದಿರುವುದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ.
 
ಇಂಧನ ಪೂರೈಕೆ ಸರಪಳಿಯಲ್ಲಿನ ಅಡಚಣೆ, ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ತೈಲ ಬೆಲೆಯಲ್ಲಿ ಏರಿಕೆಯಾಗಿರುವುದರಿಂದ ಕಳೆದ ವಾರದಿಂದ ಇಂಧನ ಬೆಲೆ ಏರಿಕೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಜಾಗತಿಕ ತೈಲ ಬೆಲೆಯಲ್ಲಿ ಏರಿಕೆ ಮತ್ತು ಅಡಚಣೆ ಒಂದೆರಡು ವಾರಗಳ ಹಿಂದಿನಿಂದ ನಡೆಯುತ್ತಿದೆ. ಅದಕ್ಕೆ ಪ್ರತಿಯಾಗಿ ಬೆಲೆ ಏರಿಕೆಯಾಗುತ್ತಿದೆ. ಆದರೆ ಚುನಾವಣೆಗಾಗಿ ಇಂಧನ ಬೆಲೆ ಪರಿಷ್ಕರಣೆ ನಿಲ್ಲಿಸಲಾಗಿತ್ತು ಎಂಬುದು ಸುಳ್ಳು ಎಂದು ಹೇಳಿದರು.

ರಷ್ಯಾ ಆಕ್ರಮಣಕ್ಕೂ ಮೊದಲೇ ಅಂತಾರಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿತ್ತು. ಈ ಸಮಯದಲ್ಲಿ ಭಾರತ ಒಂದು ಬ್ಯಾರಲ್ಗೆ 100.71 ಡಾಲರ್ ನೀಡಿ ಖರೀದಿಸುತ್ತಿತ್ತು.

ಆದರೆ ಕಳೆದ ನವೆಂಬರ್ನಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ ಬ್ಯಾರಲ್ಗೆ 82 ಡಾಲರ್ ಇತ್ತು. ಪಂಚರಾಜ್ಯ ಚುನಾವಣೆಗಳು ಘೊಷಣೆಯಾದ ನಂತರ ಇಂಧನ ಬೆಲೆ ಪರಿಷ್ಕರಣೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿಲ್ಲಿಸಿದ್ದವು.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರವೆಸಗಿ ವಿಡಿಯೋ ಮಾಡಿ ಬೆದರಿಕೆ ಮಾಡುತ್ತಿದ್ದ ಆರೋಪಿ ಅರೆಸ್ಟ್