Select Your Language

Notifications

webdunia
webdunia
webdunia
webdunia

ಔಷಧಗಳ ಬೆಲೆ ಏರಿಕೆ! ?

ಔಷಧಗಳ  ಬೆಲೆ ಏರಿಕೆ! ?
ನವದೆಹಲಿ , ಸೋಮವಾರ, 28 ಮಾರ್ಚ್ 2022 (11:14 IST)
ನವದೆಹಲಿ : ಸರಿಸುಮಾರು 800ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆಯನ್ನು ಹೆಚ್ಚಳ ಮಾಡಲು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಅನುಮತಿ ನೀಡಿದೆ.

ಸಗಟು ಬೆಲೆ ಸೂಚ್ಯಂಕದ ಆಧಾರದ ಮೇಲೆ ಔಷಧಗಳ ಬೆಲೆಗಳ್ಲಿ ಶೇ 10.76 ರಷ್ಟು ಏರಿಕೆ ಮಾಡಲಾಗಿದೆ.

ಇದರಿಂದಾಗಿ ಆ್ಯಂಟಿ ಬಯೋಟಿಕ್ ಔಷಧಗಳು, ಉರಿಯೂತ ನಿವಾರಕ ಔಷಧಗಳು, ಕಿವಿ-ಮೂಗು ಹಾಗೂ ಗಂಟಲಿಗೆ ಸಂಬಧಿತ ಔಷಧಗಳು, ಆ್ಯಂಟಿಸೆಪ್ಟಿಕ್, ಆ್ಯಂಟಿ ಫಂಗಲ್ ಹಾಗೂ ನೋವು ನಿವಾರಕ ಔಷಧಗಳ ಬೆಲೆಯಲ್ಲಿ ಏರಿಕೆ ಕಂಡುಬರಲಿದೆ.

ಬಹಳಷ್ಟು ವರ್ಷಗಳ ನಂತರ ಒಂದೇ ಬಾರಿಗೆ ಶೇ. 10 ರಷ್ಟು ಬೆಲೆಯೆರಿಕೆ ನಿರ್ಣಯವನ್ನು ಔಷಧ ಕಂಪನಿಗಳು ಸ್ವಾಗತಿಸಿವೆ. 

ಔಷಧದ ಬೆಲೆ ನಿಯಂತ್ರಣ ಕಾಯ್ದೆ 2013ರ ಪ್ರಕಾರ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು ವಾರ್ಷಿಕ ಸಗಟು ಬೆಲೆ ಸೂಚ್ಯಂಕ ಅನ್ವಯ ಪ್ರತಿ ವರ್ಷ ಏಪ್ರಿಲ್ 1 ರಂದು ಔಷಧಗಳ ಬೆಲೆಯನ್ನು ಪರಿಷ್ಕರಣೆ ಮಾಡುತ್ತದೆ.

2022ರ ಆರ್ಥಕ ವರ್ಷದಲ್ಲಿ ಸಗಟು ಬೆಲೆ ಸೂಚ್ಯಂಕ ಆಧಾರದ ಮೇಲೆ ಔಷಧಗಳ ಬೆಲೆಯಲ್ಲಿ ಶೇ 10.76ರಷ್ಟು ಏರಿಕೆ ಮಾಡಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ತಪ್ಪಿಸಿಕೊಳ್ಳಲೆತ್ನಿಸಿದ ವರ: ಪೊಲೀಸರ ಸಮ್ಮುಖದಲ್ಲಿ ತಡರಾತ್ರಿ ನಡೆದ ಮದುವೆ