Select Your Language

Notifications

webdunia
webdunia
webdunia
webdunia

2 ದಿನಗಳ ಬಳಿಕ ಕುಸಿತ ಕಂಡ ಚಿನ್ನದ ಬೆಲೆ; ಬೆಳ್ಳಿ ದರ 1,300 ರೂ. ಇಳಿಕೆ

Gold price falls after 2 days; The silver price was Rs 1
bangalore , ಗುರುವಾರ, 24 ಮಾರ್ಚ್ 2022 (20:05 IST)
2-3 ದಿನಗಳಿಂದ ಏರಿಕೆಯಾಗುತ್ತಲೇ ಇದ್ದ ಚಿನ್ನದ ಬೆಲೆ ಇಂದು ಇಳಿಕೆ ಕಂಡಿದೆ. ಚಿನ್ನದ ಬಗೆಗಿನ ಜನರ ಆಕರ್ಷಣೆ, ಪ್ರೀತಿ ಇಂದು- ನಿನ್ನೆಯದಲ್ಲ. ಮದುವೆ, ಸಮಾರಂಭಗಳು, ಅಕ್ಷಯ ತೃತೀಯ ಹೀಗೆ ವಿಶೇಷ ಸಂದರ್ಭದಲ್ಲಿ ಮಾತ್ರವಲ್ಲದೆ ಹೂಡಿಕೆಯಾಗಿಯೂ ಬಂಗಾರವನ್ನು ಖರೀದಿಸುವವರಿದ್ದಾರೆ. 2 ದಿನಗಳಿಂದ ಹೆಚ್ಚಳವಾಗಿದ್ದ ಚಿನ್ನದ ಬೆಲೆ (Gold Rate) ಇಂದು ಇಳಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 400 ರೂ. ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ (Silver Price) ಇಂದು 1 ಕೆಜಿಗೆ ಬರೋಬ್ಬರಿ 1,300 ರೂ. ಕುಸಿತ ಕಂಡಿದೆ. ಭಾರತದ ಅನೇಕ ನಗರಗಳಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿತ್ತು. ಆದರೆ, ಇಂದು ಬಂಗಾರದ ದರ ಕುಸಿತ ಕಂಡಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
 
ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,750 ರೂ. ಇದ್ದುದು 47,350 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,100 ರೂ. ಇದ್ದುದು 51,670 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,810 ರೂ. ಮುಂಬೈ- 47,350 ರೂ, ದೆಹಲಿ- 47,350 ರೂ, ಕೊಲ್ಕತ್ತಾ- 47,350 ರೂ, ಬೆಂಗಳೂರು- 47,350 ರೂ, ಹೈದರಾಬಾದ್- 47,350 ರೂ, ಕೇರಳ- 47,350 ರೂ, ಪುಣೆ- 47,420 ರೂ, ಮಂಗಳೂರು- 47,350 ರೂ, ಮೈಸೂರು- 47,350 ರೂ. ಇದೆ.
 
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,160 ರೂ, ಮುಂಬೈ- 51,670 ರೂ, ದೆಹಲಿ- 51,670 ರೂ, ಕೊಲ್ಕತ್ತಾ- 51,670 ರೂ, ಬೆಂಗಳೂರು- 51,670 ರೂ, ಹೈದರಾಬಾದ್- 51,670 ರೂ, ಕೇರಳ- 51,670 ರೂ, ಪುಣೆ- 51,740 ರೂ, ಮಂಗಳೂರು- 51,670 ರೂ, ಮೈಸೂರು- 51,670 ರೂ. ಇದೆ.
 
ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರೆ ಬೆಳ್ಳಿ ಬೆಲೆ (Silver Price) ಇಳಿಮುಖವಾಗಿದೆ.
 
ಇಂದಿನ ಬೆಳ್ಳಿಯ ದರ:
ಕಳೆದ ವಾರದಿಂದ ಗಗನಕ್ಕೇರಿದ್ದ ಬೆಳ್ಳಿ ಬೆಲೆ ಇಂದು ಭಾರೀ ಇಳಿಕೆ ಕಂಡಿದೆ. ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 1,300 ರೂ. ಇಳಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 68,900 ರೂ. ಇದ್ದುದು ಇಂದು 67,600 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 71,900 ರೂ, ಮೈಸೂರು- 71,900 ರೂ., ಮಂಗಳೂರು- 71,900 ರೂ., ಮುಂಬೈ- 67,600 ರೂ, ಚೆನ್ನೈ- 71,900 ರೂ, ದೆಹಲಿ- 67,600 ರೂ, ಹೈದರಾಬಾದ್- 71,900 ರೂ, ಕೊಲ್ಕತ್ತಾ- 67,600 ರೂ. ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ: ಪ್ರಮುಖ ನಗರಗಳಲ್ಲಿ ಇಂಧನ ದರದ ವಿವರ ಹೀಗಿದೆ