Select Your Language

Notifications

webdunia
webdunia
webdunia
webdunia

ಇಂದಿನಿಂದ ಮದ್ಯ ಮಾರಾಟಗಾರರ ಮುಷ್ಕರ?

ಇಂದಿನಿಂದ ಮದ್ಯ ಮಾರಾಟಗಾರರ ಮುಷ್ಕರ?
ಉಡುಪಿ , ಶುಕ್ರವಾರ, 6 ಮೇ 2022 (07:34 IST)
ಉಡುಪಿ : ಇಂದಿನಿಂದ ಮೇ 19ರವರೆಗೆ ಮದ್ಯ ಮಾರಾಟಗಾರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಕೆಎಸ್ಪಿಸಿಎಲ್ ಹೊಸ ನೀತಿಯಿಂದ ಮದ್ಯ ಮಾರಾಟಗಾರರಿಗೆ ಸಮಸ್ಯೆ ಎದುರಾಗಿದೆ. ಮದ್ಯ ಖರೀದಿ ಮಾಡುವ ವ್ಯವಸ್ಥೆ ಬದಲಾಗಿರುವುದರಿಂದ ನಮಗೆ ಬಹಳ ತೊಂದರೆಯಾಗಿದೆ ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಗಂಭೀರ ಆರೋಪ ಮಾಡಿದೆ.

ಕೆಎಸ್ಪಿಸಿಎಲ್ನಿಂದ ಮ್ಯಾನುವಲ್ ಮೆತಡ್ ಮೂಲಕ ಇಷ್ಟು ವರ್ಷ ವೈನ್ ಮರ್ಚೆಂಟ್ಸ್, ಬಾರ್ ಮಾಲೀಕರು ಖರೀದಿ ಮಾಡುತ್ತಿದ್ದರು. ಈಗ ವೆಬ್ಸೈಟ್ ಓಪನ್ ಮಾಡಿ, ಮಾಲೀಕರು ಲಾಗಿನ್ ಆಗಿ ತಮಗೆ ಬೇಕಾದ ಮದ್ಯಗಳನ್ನು ಆಯ್ಕೆ ಮಾಡಿ, ಆನ್ಲೈನ್ ಮೂಲಕ ಹಣ ರವಾನೆ ಮಾಡಬೇಕು.

ರಾತ್ರಿ 9 ರಿಂದ ಬೆಳಗ್ಗೆ ಒಂಬತ್ತರವರೆಗೆ ಲಿಸ್ಟ್ ಫಿಲ್ ಮಾಡಿ, ಗೋದಾಮಿನಲ್ಲಿ ದಾಸ್ತಾನಿರುವ ಮದ್ಯಗಳನ್ನು ಮಾತ್ರ ಪಡೆದುಕೊಳ್ಳಬೇಕು. ಈ ನೂತನ ಪದ್ಧತಿ ಬಾರ್ ಮತ್ತು ವೈನ್ ವ್ಯಾಪಾರಿಗಳಿಗೆ ಆತಂಕ ಸೃಷ್ಟಿಸಿದೆ. 

ಗ್ರಾಹಕರಿಂದ ಬೇಡಿಕೆ ಇರುವ ಮದ್ಯ ಸಿಗುವುದಿಲ್ಲ. ಶ್ರೀಮಂತ ಬಾರ್ ಮಾಲೀಕರು ವೈನ್ ಶಾಪ್ ಮಾಲೀಕರು ಬೇಕಾದಷ್ಟು ಮದ್ಯವನ್ನು ಖರೀದಿ ಮಾಡುತ್ತಾರೆ. ಸಣ್ಣ ಉದ್ದಿಮೆದಾರರಿಗೆ ಇದರಿಂದ ಬಹಳ ಸಮಸ್ಯೆಯಾಗಿದೆ.

ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಶೇ.80 ಜನಕ್ಕೆ ಕಳೆದ ಒಂದು ತಿಂಗಳಿನಿಂದ ಸಮಸ್ಯೆಯಾಗಿದೆ.

ಒಂದೊಂದು ದಿನ ಒಂದೊಂದು ಜಿಲ್ಲೆಯಲ್ಲಿ ಮದ್ಯ ಮಾರಾಟಗಾರರು ಪ್ರತಿಭಟನೆಗೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.  ಮುಷ್ಕರ ಎಲ್ಲೆಲ್ಲಿ? ಯಾವಾಗ?
ಮೇ 6 : ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ
ಮೇ 10 : ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ
ಮೇ 12 : ಮೈಸೂರು, ಚಿಕ್ಕಮಗಳೂರು, ಹಾಸನ, ಮಂಡ್ಯ, ಮಂಗಳೂರು, ಕೊಡಗು, ಶಿವಮೊಗ್ಗ, ಉಡುಪಿ, ಉತ್ತರಕನ್ನಡ
ಮೇ 17 : ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು
ಮೇ 19 : ಬೆಂಗಳೂರು ನಗರ ವಿಭಾಗದ ಕೆಎಸ್ಬಿಸಿಎಲ್ ಡಿಪೋಗಳಲ್ಲಿ ಮದ್ಯ ಖರೀದಿ ಮಾಡದಿರಲು ಬಾರ್ ಮಾಲೀಕರ ಸಂಘ ನಿರ್ಧರಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ರೂಪಾಂತರಿ ಪತ್ತೆಗೆ ಪಾಲಿಕೆಯ ಮಹತ್ವದ ಹೆಜ್ಜೆ