Publish Date: Sat, 27 Aug 2022 (09:08 IST)
Updated Date: Sat, 27 Aug 2022 (09:52 IST)
ನವದೆಹಲಿ : ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್) ಮೇಲಿನ ಅಮಾನತನ್ನು ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಶುಕ್ರವಾರ ತೆರವುಗೊಳಿಸಿದೆ.
ಈ ಕ್ರಮದಿಂದ 17 ವರ್ಷದೊಳಗಿನ ಮಹಿಳಾ ವಿಶ್ವಕಪ್ 2022ರ ಪಂದ್ಯದಲ್ಲಿ ಭಾರತ ಭಾಗವಹಿಸಲು ಸಾಧ್ಯವಾಗಲಿದೆ.
ಫಿಫಾ ಕೌನ್ಸಿಲ್ನ ಬ್ಯೂರೋ ಅನಗತ್ಯ ಮೂರನೇ ವ್ಯಕ್ತಿಯ ಪ್ರಭಾವದಿಂದಾಗಿ ಎಐಎಫ್ಎಫ್ ಅನ್ನು ಅಮಾನತುಗೊಳಿಸಿತ್ತು. ಇದೀಗ ಎಐಎಫ್ಎಫ್ ಮೇಲೆ ವಿಧಿಸಲಾಗಿದ್ದ ಅಮಾನತನ್ನು ತೆಗೆದುಹಾಕಲು ನಿರ್ಧರಿಸಿರುವುದಾಗಿ ಫಿಫಾ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.