Select Your Language

Notifications

webdunia
webdunia
webdunia
webdunia

ಕೋವಿಡ್-19 ಕಾಲರ್ ಟ್ಯೂನ್ ಬಂದ್?

ಕೋವಿಡ್-19 ಕಾಲರ್ ಟ್ಯೂನ್ ಬಂದ್?
ನವದೆಹಲಿ , ಮಂಗಳವಾರ, 29 ಮಾರ್ಚ್ 2022 (09:25 IST)
ನವದೆಹಲಿ : ಕೋವಿಡ್-19 ಪ್ರಕರಣಗಳ ಇಳಿಕೆಯ ಮಧ್ಯೆ, ಕೊರೊನಾ ವೈರಸ್ ಜಾಗೃತಿ ಮತ್ತು ಮುನ್ನೆಚ್ಚರಿಕೆಗಳ ಕುರಿತು ಕಾಲರ್ ಟ್ಯೂನ್ ಅನ್ನು ನಿಲ್ಲಿಸಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್-19 ಕಾಲರ್ ಟ್ಯೂನ್ ಅನ್ನು ಎರಡು ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗವು ದೇಶವನ್ನು ಹಬ್ಬಿದಾಗ ಪ್ರಾರಂಭಿಸಲಾಯಿತು.

ಏರ್ಟೆಲ್, ಬಿಎಸ್ಎನ್ಎಲ್, ರಿಲಯನ್ಸ್, ಜಿಯೋ ಮತ್ತು ವೊಡಾಫೋನ್-ಐಡಿಯಾ ಸೇರಿದಂತೆ ಆಪರೇಟರ್ಗಳು ತಮ್ಮ ಕಾಲರ್ ಟ್ಯೂನ್ಗಳನ್ನು ಮಾರ್ಚ್ 2020ರಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಬದಲಾಯಿಸಿದ್ದರು.

ನಂತರದಲ್ಲಿ ಅದನ್ನ ಬದಲಾಯಿಸಲಾಯಿತು. ಹೊಸ ಸಂದೇಶವು ಜನರನ್ನು ಲಸಿಕೆ ಹಾಕುವಂತೆ ಮಾಹಿತಿ ನೀಡುತ್ತಿದೆ. ಪ್ರತಿ ತಿಂಗಳು ಕೊರೊನಾವೈರಸ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಸೋಮವಾರ ಭಾರತದಲ್ಲಿ 1,270 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿಗೆ ಆಗ್ರಹಿಸಬೇಡಿ?