Publish Date: Tue, 29 Mar 2022 (09:18 IST)
Updated Date: Tue, 29 Mar 2022 (09:21 IST)
ತುಮಕೂರು : ಶ್ರೀ ಶಿವಕುಮಾರ ಶ್ರೀಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಕೊಡುವಂತೆ ಯಾರೂ ಆಗ್ರಹಿಸಬೇಡಿ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗಸ್ವಾಮಿಜಿಗಳು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶಸ್ತಿ ಕೊಡಿ ಎನ್ನುವ ಮಾತನ್ನು ಯಾರು ಕೂಡಾ ಆಡಬಾರದು. ಅದನ್ನ ಕೇಳಿ ಪಡೆಯುವ ಪ್ರಶ್ನೆ ಇಲ್ಲ.
ಯಾರು ಕೇಳಲೇ ಬಾರದು ಅದರ ಬಗ್ಗೆ ಚರ್ಚೆ ಮಾಡಲೇಬಾರದು. ಶ್ರೀಗಳು ಭಾರತ ರತ್ನ ವನ್ನು ಮೀರಿರುವಂತವರು. ಅದು ಬಂದ ಕ್ಷಣಕ್ಕೆ ಅವರ ಗೌರವ ಹೆಚ್ಚುವಂತಹದ್ದಲ್ಲ. ಅದನ್ನ ನಾವು ಯಾರು ನಿರೀಕ್ಷೆ ಮಾಡಬಾರದು ಎಂದು ತಿಳಿಸಿದ್ದಾರೆ.