Publish Date: Wed, 23 Mar 2022 (20:18 IST)
Updated Date: Wed, 23 Mar 2022 (20:26 IST)
ದೊಡ್ಮನೆ ಯುವರಾಜ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅನೇಕ ಸಾಮಾಜಮುಖಿ ಕೆಲಸಗಳನ್ನ ಮಾಡಿದ್ದಾರೆ. ಜೊತೆಗೆ ಕರ್ನಾಟಕ ಮಿಲ್ಕ್ ಪೆಡ್ರೆರೇಷನ್ ತಯಾರು ಮಾಡಿದ ಸಿಹಿ ತಿಂಡಿಗಳು ಎಲ್ಲಾದಕ್ಕೂ ಪುನೀತ್ ರಾಯಬಾರಿಯಾಗಿದ್ರು. ಉಚಿತವಾಗಿ ಪ್ರಚಾರ ಮಾಡುವುದರ ಮೂಲಕ ರೈತರಿಗೆ ನೆರವಾಗಿದ್ರು.ಕಳೆದ ವಾರ ಪುನೀತ್ ರಾಜ್ ಕುಮಾರ್ ಗೆ ಸಹಕಾರ ರತ್ನ ಪ್ರಶಸ್ತಿಯನ್ನ ಘೋಷಣೆ ಮಾಡಲಾಗಿತ್ತು. ಆದ್ರೆ ಇಂದು ಖುದ್ದು ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ಎಸ್ ಟಿ ಸೋಮಶೇಖರ್, ಜಿ ಟಿ ದೇವೆಗೌಡ ಆಗಮಿಸಿ ಪುನೀತ್ ಪತ್ನಿ ಅಶ್ವಿನಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.ಅಶ್ವಿನಿಯವರು ಪ್ರಶಸ್ತಿಯನ್ನ ಸಂತಸದಿಂದ ಸ್ವೀಕರಿಸಿದ್ದಾರೆ. ಬಳಿಕ ಮಾತನಾಡಿದ ಸೋಮಶೇಖರ್ , ಜಿಟಿ ದೇವೆಗೌಡ ಪುನೀತ್ ರಾಜ್ ಕುಮಾರ್ ರವರ ಕಾರ್ಯವೈಖರಿಯನ್ನ ಕೊಂಡಾಡಿದ್ದಾರೆ