Select Your Language

Notifications

webdunia
webdunia
webdunia
Tuesday, 8 April 2025
webdunia

ಎರಡೇ ವಾರಕ್ಕೆ ಜೇಮ್ಸ್ ತೆರವಿಗೆ ಯತ್ನ: ನಿರ್ದೇಶಕ, ಫ್ಯಾನ್ಸ್ ಆಕ್ರೋಶ

ಜೇಮ್ಸ್
ಬೆಂಗಳೂರು , ಬುಧವಾರ, 23 ಮಾರ್ಚ್ 2022 (09:10 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಥಿಯೇಟರ್ ನಲ್ಲಿ ಮೊನ್ನೆಯಷ್ಟೇ ಬಿಡುಗಡೆಯಾಗಿ ನೂರು ಕೋಟಿ ಗಳಿಕೆ ಮಾಡಿದೆ. ಈ ಖುಷಿಯ ಬೆನ್ನಲ್ಲೇ ಥಿಯೇಟರ್ ಗಳಲ್ಲಿ ಜೇಮ್ಸ್ ಎತ್ತಂಗಡಿ ಮಾಡಿಸಲಾಗುತ್ತಿದೆ ಎಂಬ ವರದಿಯಾಗಿದೆ.

ಎರಡನೇ ವಾರಕ್ಕೇ ಜೇಮ್ಸ್ ಸಿನಿಮಾವನ್ನು ಹಲವು ಚಿತ್ರಮಂದಿರಗಳಿಂದ ತೆರವು ಮಾಡಲಾಗುತ್ತಿದೆ ಎಂಬ ಸುದ್ದಿ ಕೇಳಿಬಂದಿದೆ. ಇದಕ್ಕೆ ನಿರ್ದೇಶಕ ಚೇತನ್ ಮತ್ತು ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಚಿತ್ರನಿರ್ದೇಶಕ ಚೇತನ್ ‘ಎಲ್ಲಾ ಚಿತ್ರಮಂದಿರಗಳ ಮಾಲಿಕರು, ಪ್ರದರ್ಶಕರಿಗೆ ನನ್ನ ಮನವಿ, ನಿಮ್ಮ ಸಹಕಾರದಿಂದ ಮೊದಲನೇ ವಾರ ಭಾರೀ ಯಶಸ್ಸು ಸಿಕ್ಕಿದೆ. ಇದೀಗ ಎರಡನೇ ವಾರವೂ ಮುಂದುವರಿಯಲು. ಇದು ಅಪ್ಪು ಸರ್ ಅಭಿನಯಿಸಿರುವ ಕೊನೆ ಸಿನಿಮಾ, ಲಕ್ಷಾಂತರ ಅಭಿಮಾನಿಗಳ ಕನಸು ಇದು. ಈ ಸಿನಿಮಾ ಎರಡನೇ ವಾರವೂ ಪ್ರದರ್ಶನವಾಗಲು ನಿಮ್ಮ ಸಹಕಾರವಿರಲಿ. ದಯವಿಟ್ಟು ಚಿತ್ರಮಂದಿರಗಳಿಂದ ಜೇಮ್ಸ್ ಸಿನಿಮಾ ತೆಗೆಯಬೇಡಿ’ ಎಂದು ಚೇತನ್ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಪ್ರಚಾರದಲ್ಲಿ ಭಾಗಿಯಾಗಲು ಅಭಿಮಾನಿಗಳಿಗೂ ಸುವರ್ಣಾವಕಾಶ