Publish Date: Fri, 01 Jun 2018 (09:04 IST)
Updated Date: Fri, 01 Jun 2018 (09:05 IST)
ಬೆಂಗಳೂರು: ಹಣಕಾಸು ಖಾತೆಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಟ್ಟು ಹಿಡಿದು ಕೊನೆಗೂ ಈ ಖಾತೆ ಜೆಡಿಎಸ್ ಪಾಲಾಗುವುದರೊಂದಿಗೆ ಎಲ್ಲವೂ ಸುಖಾಂತ್ಯವಾಯಿತು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ತಲೆದೋರಿದೆ.
ಇದೀಗ ಮತ್ತೊಂದು ಪ್ರಮುಖ ಖಾತೆ ಗೃಹ ಇಲಾಖೆಗಾಗಿ ಕಾಂಗ್ರೆಸ್ ನ ಡಿಕೆ ಶಿವಕುಮಾರ್ ಮತ್ತು ಜೆಡಿಎಸ್ ನ ಎಚ್ ಡಿ ರೇವಣ್ಣ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಹೀಗಾಗಿ ಮತ್ತೆ ಖಾತೆ ಹಂಚಿಕೆ ಕಗ್ಗಂಟಾಗಲಿದೆ. ಈ ಮೊದಲು ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಹುದ್ದೆಗಾಗಿ ಹೈಕಮಾಂಡ್ ಮುಂದೆ ಒತ್ತಡ ಹೇರಿದ್ದರು. ಆದರೆ ಇದೀಗ ಗೃಹ ಖಾತೆ ಮೇಲೆ ಅವರ ದೃಷ್ಟಿ ಬಿದ್ದಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬರಲು ಹೆಚ್ಚು ಶ್ರಮವಹಿಸಿದ್ದ ಡಿಕೆಶಿಗೆ ನಿರಾಸೆ ಮಾಡಲು ಹೈಕಮಾಂಡ್ ಗೂ ಮನಸ್ಸಿರಲ್ಲ. ಆದರೆ .ಅಷ್ಟು ಬೇಗ ಗೃಹ ಇಲಾಖೆಯಂತಹ ಪ್ರಮುಖ ಖಾತೆಯನ್ನು ಬಿಟ್ಟುಕೊಡಲು ಜೆಡಿಎಸ್ ಕೂಡಾ ತಯಾರಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.