Publish Date: Thu, 31 May 2018 (13:26 IST)
Updated Date: Thu, 31 May 2018 (13:28 IST)
ಬೆಂಗಳೂರು: ಗುಜರಾತ್ ಶಾಸಕರನ್ನು ರಾಜ್ಯದಲ್ಲಿ ರೆಸಾರ್ಟ್ ನಲ್ಲಿ ಇರಿಸಿದ್ದಾಗ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾರೀ ಆಫರ್ ನೀಡಿದ್ದರಂತೆ!
ಹೀಗೊಂದು ಸ್ಪೋಟಕ ವಿಚಾರವನ್ನು ವಿಧಾನ ಪರಿಷತ್ ಸದಸ್ಯ ಸಿಎಂ ಲಿಂಗಪ್ಪ ಬಾಯ್ಬಿಟ್ಟಿದ್ದಾರೆ. ಕುದುರೆ ವ್ಯಾಪಾರ ತಪ್ಪಿಸಲು ಬೆಂಗಳೂರಿನ ರೆಸಾರ್ಟ್ ನಲ್ಲಿ ಗುಜರಾತ್ ಶಾಸಕರನ್ನು ಕಾಪಾಡುವ ಜವಾಬ್ದಾರಿ ಡಿಕೆಶಿಗೆ ವಹಿಸಲಾಗಿತ್ತು.
ಈ ಸಂದರ್ಭದಲ್ಲಿ ಡಿಕೆಶಿಗೆ ಕರೆ ಮಾಡಿದ್ದ ಅಮಿತ್ ಶಾ 38 ಶಾಸಕರನ್ನು ನೀವೇ ಇಟ್ಟುಕೊಳ್ಳಿ. ನಾಲ್ವರು ಶಾಸಕರನ್ನು ನಮಗೆ ಕೊಡಿ. ಈಗ ನೀವು ನಮಗೆ ಸಹಾಯ ಮಾಡಿದ್ದರೆ ನಿಮಗೆ ಮುಂದೆ ದೊಡ್ಡ ಉಪಕಾರ ಮಾಡುವುದಾಗಿ ಶಾ ಫೋನ್ ಮೂಲಕ ಡಿಕೆಶಿಗೆ ಆಫರ್ ನೀಡಿದ್ದರು ಎಂದು ಲಿಂಗಪ್ಪ ಆರೋಪಿಸಿದ್ದಾರೆ.
ಆ ಸಂದರ್ಭದಲ್ಲಿ ಡಿಕೆಶಿ ಅಮಿತ್ ಶಾ ಆಫರ್ ಗೆ ಬಗ್ಗಲಿಲ್ಲ. ನನ್ನ ರಕ್ತದಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ನಾನು ನನ್ನ ಪಕ್ಷಕ್ಕೆ ದ್ರೋಹ ಬಗೆಯಲ್ಲ ಎಂದಿದ್ದರು ಎಂದು ಲಿಂಗಪ್ಪ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.