Publish Date: Thu, 31 May 2018 (10:46 IST)
Updated Date: Thu, 31 May 2018 (10:52 IST)
ಬೆಂಗಳೂರು: ಪ್ರತಿಷ್ಠಿತ ಆರ್ ಆರ್ ನಗರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಭಾರೀ ಮುನ್ನಡೆ ಸಾಧಿಸಿದ್ದು, ಗೆಲುವಿನತ್ತ ಹೆಜ್ಜೆ ಹಾಕುತ್ತಿದ್ದರೆ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ನಿರಾಸೆಯಿಂದ ನಿರ್ಗಮಿಸಿದ್ದಾರೆ.
ಬೆಳಿಗ್ಗೆಯೇ ಮತ ಎಣಿಕೆ ಕೇಂದ್ರದ ಬಳಿ ಬೆಂಬಲಿಗರೊಂದಿಗೆ ಬಂದಿದ್ದ ಮುನಿರಾಜು, ಮುನಿರತ್ನ ಭಾರೀ ಅಂತರದಿಂದ ಮುನ್ನಡೆ ಸಾಧಿಸುತ್ತಿರುವ ಸುದ್ದಿ ತಿಳಿದು ಹೊರ ನಡೆದಿದ್ದಾರೆ. ಇಲ್ಲಿ ಮುನಿರಾಜು ದ್ವಿತೀಯ ಸ್ಥಾನದಲ್ಲಿದ್ದರೂ ಮುನಿರತ್ನರಿಂದ ಭಾರೀ ಹಿನ್ನಡೆಯಲ್ಲಿದ್ದಾರೆ. ಹಾಗಾಗಿ ಸೋಲು ಖಚಿತ ಎಂಬಂತಾಗಿದೆ.
ಅತ್ತ ಮತ ಎಣಿಕೆ ಕೇಂದ್ರದ ಹೊರಗಡೆ ನಿಂತಿರುವ ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೇ ಗೆಲುವಿನ ಸಂಭ್ರಮ ಆಚರಿಸಲು ಆರಂಭಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.