Select Your Language

Notifications

webdunia
webdunia
webdunia
webdunia

ಪರ್ವೇಝ್ ಮುಶರ್ರಫ್‌ ವಿರುದ್ಧ ಹೊಸ ಆದೇಶವೊಂದನ್ನು ಹೊರಡಿಸಿದ ಪಾಕಿಸ್ತಾನ ಸರಕಾರ

ಪರ್ವೇಝ್ ಮುಶರ್ರಫ್‌ ವಿರುದ್ಧ ಹೊಸ ಆದೇಶವೊಂದನ್ನು ಹೊರಡಿಸಿದ ಪಾಕಿಸ್ತಾನ ಸರಕಾರ
ಪಾಕಿಸ್ತಾನ , ಶುಕ್ರವಾರ, 1 ಜೂನ್ 2018 (07:10 IST)
ಪಾಕಿಸ್ತಾನ : ತನ್ನ ವಿರುದ್ಧದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಇದೀಗ  ಮಾಜಿ ಅಧ್ಯಕ್ಷ ಜನರಲ್ ಪರ್ವೇಝ್ ಮುಶರ್ರಫ್‌ ಅವರ ರಾಷ್ಟ್ರೀಯ ಗುರುತು ಕಾರ್ಡ್ (ಎನ್‌ಐಸಿ) ಮತ್ತು ಪಾಸ್‌ಪೋರ್ಟ್ ರದ್ದುಮಾಡುವಂತೆ  ಪಾಕಿಸ್ತಾನ ಸರಕಾರ ಆಂತರಿಕ ಸಚಿವಾಲಯಕ್ಕೆ ಆದೇಶಿಸಿದೆ.


ಈ ಮೂಲಕ ದುಬೈಯಲ್ಲಿ ನೆಲೆಸಿರುವ ಮಾಜಿ ಸೇನಾ ಮುಖ್ಯಸ್ಥನ ಪ್ರಯಾಣವನ್ನು ನಿರ್ಬಂಧಿಸಲು ಮತ್ತು ಅವರಿಗೆ ಲಭಿಸುತ್ತಿರುವ ಇತರ ಹಲವು ಸವಲತ್ತುಗಳನ್ನು ತಡೆಹಿಡಿಯಲು ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಶನಲ್ ಡಾಟಾ ಬೇಸ್ ಆಯಂಡ್ ರಿಜಿಸ್ಟ್ರೇಶನ್ ಅಥಾರಿಟಿ ಹಾಗೂ ವಲಸೆ ಮತ್ತು ಪಾಸ್‌ಪೋರ್ಟ್ ನಿರ್ದೇಶನಾಲಯಕ್ಕೆ ಸೂಚನೆಗಳನ್ನು ನೀಡಿದೆ ಎನ್ನಲಾಗಿದೆ.


ಇದರಿಂದ ಮುಶರ್ರಫ್‌ ಅವರಿಗೆ  ವಿದೇಶ ಪ್ರಯಾಣ ಮಾಡಲು ಹಾಗೂ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೇ ಪಾಕಿಸ್ತಾನ ಮತ್ತು ವಿದೇಶಗಳಲ್ಲಿರುವ ತನ್ನ ಆಸ್ತಿಗಳನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಕೂಡ ಅವರಿಗೆ ಸಾಧ್ಯವಾಗುವುದಿಲ್ಲ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ಗೆ ಭಾರೀ ಆಫರ್ ನೀಡಿದ್ದರಂತೆ ಅಮಿತ್ ಶಾ!