ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಗೆ ಮರುಜೀವ!

ಬುಧವಾರ, 30 ಮೇ 2018 (09:25 IST)
ಮುಂಬೈ: ರಾಜತಾಂತ್ರಿಕ ಸಮಬಂಧ ಹಳಸಿದ ಹಿನ್ನಲೆಯಲ್ಲಿ ಪಾಕಿಸ್ತಾನದ ಜತೆ ಕ್ರಿಕೆಟ್ ಆಡುವುದನ್ನೇ ಬಿಟ್ಟಿರುವ ಭಾರತ ಮತ್ತೆ ಕ್ರಿಕೆಟ್ ಸರಣಿ ಆಡಲು ಮನಸ್ಸು ಮಾಡುತ್ತಾ?

ಪಾಕಿಸ್ತಾನದ ಜತೆ ಕ್ರಿಕೆಟ್ ಆಡುವ ಬಗ್ಗೆ ನಿಲುವು ಸ್ಪಷ್ಟಪಡಿಸಿ ಎಂದು ಬಿಸಿಸಿಐ ಇದೀಗ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಕೇಂದ್ರದ ಒಪ್ಪಿಗೆ ಸಿಗದೆ ಕ್ರಿಕೆಟ್ ಸರಣಿ ಸಾಧ್ಯವಿಲ್ಲ. ಬಿಸಿಸಿಐ ಕೂಡಾ ಇದೇ ನಿಲುವು ಹೊಂದಿದೆ.

ಹೀಗಾಗಿ ಇದೀಗ ಕೇಂದ್ರದ ನಿಲುವು ಏನೆಮದು ಪ್ರಶ್ನೆ ಮಾಡಿದೆ. ಈಗಾಗಲೇ ಉಭಯ ದೇಶಗಳ ನಡುವೆ ಸರಣಿ ನಡೆಯದೇ ಇರುವುದಕ್ಕೆ ಆಗಿರುವ ನಷ್ಟದ ಪರಿಹಾರ ಕೊಡಬೇಕೆಂದು ಪಾಕ್ ಕ್ರಿಕೆಟ್ ಮಂಡಳಿ ದಾವೆ ಹೂಡಿದೆ. ಹೀಗಾಗಿ ಕೇಂದ್ರದ ನಿಲುವಿನ ಮೇಲೆ ಎರಡು ದೇಶದ ನಡುವಿನ ಕ್ರಿಕೆಟ್ ಸರಣಿ ಭವಿಷ್ಯ ನಿಂತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಐಪಿಎಲ್ ಗೆದ್ದ ಬಳಿಕ ತವರಿಗೆ ಮರಳುವ ಹಾದಿಯಲ್ಲಿ ಸಿಎಸ್ ಕೆ ಕ್ರಿಕೆಟಿಗರ ಎಕ್ಸ್ ಕ್ಲೂಸಿವ್ ಫೋಟೋ