Publish Date: Thu, 30 Mar 2023 (09:01 IST)
Updated Date: Thu, 30 Mar 2023 (09:28 IST)
ನವದೆಹಲಿ : ಕಳೆದ ಐದು ತಿಂಗಳಿಂದ ದಿನದ ವರದಿಯಲ್ಲಿ 2,000 ಗಡಿ ದಾಟಿರದ ಕೊರೋನಾ ಪ್ರಕರಣಗಳು ಕಳೆದ 24 ಗಂಟೆಯಲ್ಲಿ ಏರಿಕೆ ಕಂಡಿದೆ. ದೇಶದಲ್ಲಿ 2151 ಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ ದೇಶದಲ್ಲಿ ಸಕ್ರಿಯ ಪ್ರಕರಣಗಳು 11,903 ಎಂದು ಕೇಂದ್ರ ಆರೋಗ್ಯ ಸಚಿವಾಯ ತಿಳಿಸಿದೆ.
ಕಳೆದ ಅಕ್ಟೋಬರ್ 28ರಂದು ಒಂದೇ ದಿನ ದೇಶದಲ್ಲಿ 2208 ಕೊರೋನಾ ಪ್ರಕರಣಗಳು ದಾಖಲಾಗಿದ್ದವು. ದಿನ ನಿತ್ಯದ ಪಟ್ಟಿಯಲ್ಲಿ ಕೊರೋನಾ ಪ್ರಕರಣ 1.51% ಇದ್ದು, ಕರ್ನಾಟಕದಲ್ಲಿ ಒಂದು, ಮಹಾರಾಷ್ಟ್ರದಲ್ಲಿ ಮೂರು ಹಾಗೂ ಕೇರಳದಲ್ಲಿ ಒಂದು ಸಾವಾಗಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾದಿಂದಾಗಿ ಸಾವಿಗೀಡಾದವರ ಸಂಖ್ಯೆ 5,30,848ಕ್ಕೆ ಏರಿಕೆಯಾಗಿದೆ.