Publish Date: Fri, 24 Mar 2023 (10:20 IST)
Updated Date: Fri, 24 Mar 2023 (10:36 IST)
ಬೆಂಗಳೂರು: ಡಾ.ರಾಜ್ ಕುಮಾರ್ ಮೊಮ್ಮಗಳು, ನಟಿ ಧನ್ಯಾ ರಾಮ್ ಕುಮಾರ್ ಕೊರೋನಾ ಸೋಂಕಿಗೊಳಗಾಗಿದ್ದಾರೆ.
ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಧನ್ಯಾ ರಾಮ್ ಕುಮಾರ್ ಹಂಚಿಕೊಂಡಿದ್ದಾರೆ. ಜೊತೆಗೆ ಎಚ್ಚರಿಕೆಯಿಂದಿರುವಂತೆ ಸಂದೇಶ ನೀಡಿದ್ದಾರೆ.
ಕೊರೋನಾ ಪ್ರಕರಣ ಈಗ ಕಡಿಮೆಯಾಗಿರಬಹುದು. ಆದರೆ ಇನ್ನೂ ಎಚ್ಚರಿಕೆಯಿಂದಿರುವುದು ಮುಖ್ಯ. ಸದ್ಯಕ್ಕೆ ಧನ್ಯಾ ಎರಡು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಕೊರೋನಾ ಸೋಂಕಿಗೊಳಗಾಗಿರುವುದರಿಂದ ಕೆಲವು ದಿನ ವಿಶ್ರಾಂತಿ ಪಡೆದು ಕಮ್ ಬ್ಯಾಕ್ ಮಾಡಲಿರುವುದಾಗಿ ಹೇಳಿದ್ದಾರೆ.