ಬೆಂಗಳೂರು: ಡಾರ್ಲಿಂಗ್ ಕೃಷ್ಣಗೆ ನಿರ್ದೇಶಕನಾಗಿ, ನಟನಾಗಿ ಸಾಕಷ್ಟು ಖ್ಯಾತಿ ತಂದುಕೊಟ್ಟಿದ್ದು ಲವ್ ಮಾಕ್ಟೇಲ್ ಸಿನಿಮಾ.
ಈಗಾಗಲೇ ಕೃಷ್ಣ ಲವ್ ಮಾಕ್ಟೇಲ್ 1 ಬಳಿಕ ಎರಡನೇ ಭಾಗ ಕೂಡಾ ಮಾಡಿ ಮುಗಿಸಿದ್ದಾರೆ. ಇದೀಗ ಯುಗಾದಿ ದಿನದಂದು ಡಾರ್ಲಿಂಗ್ ಕೃಷ್ಣ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಲವ್ ಮಾಕ್ಟೇಲ್ 3 ಸ್ಕ್ರಿಪ್ಟ್ ಮಾಡುತ್ತಿರುವುದಾಗಿ ಫೋಟೋ ಸಹಿತ ಪ್ರಕಟಿಸಿದ್ದಾರೆ. ಲವ್ ಮಾಕ್ಟೇಲ್ ಅಲ್ಲದೆ, ಡಾರ್ಲಿಂಗ್ ಕೃಷ್ಣ ಇತ್ತೀಚೆಗೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ ಅವರಿಗೆ ಆ ಸಿನಿಮಾ ಕೊಟ್ಟಷ್ಟು ಸಕ್ಸಸ್ ಯಾವುದೂ ಕೊಟ್ಟಿರಲಿಲ್ಲ. ಹೀಗಾಗಿ ಮತ್ತೆ ತಮ್ಮ ಸಕ್ಸಸ್ ಫಾರ್ಮುಲಾ ಹಿಂದೆ ಹೋಗಿದ್ದಾರೆ.