ಲಂಡನ್ : ರಷ್ಯಾ-ಉಕ್ರೇನ್ ಬಿಕ್ಕಟ್ಟು ತೀವ್ರಗೊಂಡಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರೀ ಏರಿಕೆ ಕಂಡಿದೆ.
ಕಚ್ಚಾ ತೈಲದ ಬೆಲೆ ಬ್ಯಾರಲ್ಗೆ 94.84( 7,165ರೂ.) ಡಾಲರ್ಗೆ ಏರಿಕೆಯಾಗಿದ್ದು, ಶೀಘ್ರವೇ 100 ಡಾಲರ್ಗೆ ಏರಿಕೆಯಾಗುವ ಸಾಧ್ಯತೆಯಿದೆ. ಸದ್ಯ ಭಾರತದಲ್ಲಿ ಲೀಟರ್ಗೆ 100 ರೂ. ಅಸುಪಾಸಿನಲ್ಲಿರುವ ಪೆಟ್ರೋಲ್ ದರ ತೈಲ ಬೆಲೆ 100 ಡಾಲರ್ಗೆ ಏರಿಕೆಯಾದರೆ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ.
ತಿಂಗಳ ಅಂತ್ಯದ ವೇಳೆ 8 ವರ್ಷದ ಗರಿಷ್ಠವಾದ 100 ಡಾಲರ್ ತಲುಪುವ ಸಾಧ್ಯತೆ ಇದೆ. ಕೊರೊನಾ ಹೊಡೆತದಿಂದ ನಲುಗಿದ್ದ ದೇಶಗಳು ಈಗಷ್ಟೇ ಆರ್ಥಿಕತೆ ಚೇತರಿಕೆ ಕಾಣುತ್ತಿವೆ. ದರ ಏರಿಕೆಯಾದಲ್ಲಿ ಹಲವು ರಾಷ್ಟ್ರಗಳ ಆರ್ಥಿಕತೆಯ ಮೇಲೆ ಭಾರೀ ಪೆಟ್ಟು ಬೀಳುವ ಸಾಧ್ಯತೆಯಿದೆ.
ತನ್ನ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಿದನ್ನು ಉಕ್ರೇನ್ ಪ್ರಶ್ನಿಸಿದೆ. ಮುಂದಿನ 48 ಗಂಟೆಯ ಒಳಗಡೆ ರಷ್ಯಾಈ ಬಗ್ಗೆ ಕಾರಣ ನೀಡಬೇಕು ಎಂದು ಹೇಳಿದೆ.