ನವದೆಹಲಿ : ಭಾರತ ಔಷಧ ನಿಯಂತ್ರಕದಿಂದ ಕೋವಿಡ್ ವಿರೋಧಿ ಲಸಿಕೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಇನ್ಮುಂದೆ ಮಾರುಕಟ್ಟೆಯಲ್ಲಿ ಸಿಗಲಿವೆ ಎಂದು ಮೂಲಗಳು ತಿಳಿಸಿವೆ.
ಈ ಲಸಿಕೆಗಳ ಮಾರುಕಟ್ಟೆ ಮಾರಾಟವನ್ನು ʻಹೊಸ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗಗಳ ನಿಯಮಗಳು, 2019ರ ಅಡಿಯಲ್ಲಿ ಅನುಮೋದಿಸಲಾಗಿದೆ.
ಮಾರುಕಟ್ಟೆಯಲ್ಲಿ ಲಭ್ಯವೆಂದ ಮಾತ್ರಕ್ಕೆ ಅಂಗಡಿಗಳಲ್ಲೆಲ್ಲ ಸಿಗುತ್ತೆ ಎಂದರ್ಧವಲ್ಲ. ಈ ಎರಡೂ ಲಸಿಕೆಗಳು ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳಲ್ಲಿ ಲಭ್ಯವಿರುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ.
ಕೋವಿಶೀಲ್ಡ್ಗೆ ನಿಯಮಿತ ಮಾರುಕಟ್ಟೆ ಅಧಿಕಾರವನ್ನು ಕೋರಿ ಅ.25 ರಂದು ಡಿಸಿಜಿಐಗೆ ಸೀರಮ್ ಇನ್ಸ್ಟಿಟ್ಯೂಟ್ ಅರ್ಜಿ ಸಲ್ಲಿಸಲಾಗಿತ್ತು. ಅಂತೆಯೇ ಕೋವ್ಯಾಕ್ಸಿನ್ಗೆ ನಿಯಮಿತ ಮಾರುಕಟ್ಟೆ ಅನುಮೋದನೆಗೆ ಭಾರತ್ ಬಯೋಟೆಕ್ ಅರ್ಜಿ ಸಲ್ಲಿಸಿಸಿದೆ.