Select Your Language

Notifications

webdunia
webdunia
webdunia
webdunia

ಭಾರಿ ಹಾನಿ! ಮಳೆ ಪ್ರವಾಹಕ್ಕೆ2 ಸಾವಿರ ಮನೆಗಳು ನೆಲಸಮ

ಭಾರಿ ಹಾನಿ! ಮಳೆ ಪ್ರವಾಹಕ್ಕೆ2 ಸಾವಿರ ಮನೆಗಳು ನೆಲಸಮ
ಬೆಂಗಳೂರು , ಭಾನುವಾರ, 21 ನವೆಂಬರ್ 2021 (13:11 IST)
ಬೆಂಗಳೂರು : ತುಮಕೂರು, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸುಮಾರು 2 ಸಾವಿರ ಮನೆಗಳು ನೆಲಸಮವಾಗಿವೆ.
ಬಯಲು ಸೀಮೆಯಲ್ಲಿ ಕಳೆದ 25-30 ವರ್ಷಗಳಿಂದ ಇಂತಹ 'ಅಕಾಲಿಕ ಅತಿವೃಷ್ಟಿ'ಯಾಗಿರಲಿಲ್ಲ. ಈಗ ಅಂತರ್ಜಲ ಮಟ್ಟ ಕೂಡ ಹೆಚ್ಚಿದೆ. ಅಂತರ್ಜಲ ಮಟ್ಟ ಹೆಚ್ಚಳವನ್ನು ಉನ್ನತೀಕರಣ ಪ್ರಕ್ರಿಯೆ ಎನ್ನಬಹುದು. ವೇಗವಾಗಿ ಭೂಮಿಯಿಂದ ಮೇಲ್ಪದರಕ್ಕೆ ಜಲ ದಬ್ಬಲ್ಪಡುವಾಗ ಅದಕ್ಕೆ ತಕ್ಕ ಪ್ರತಿರೋಧ ಒಡ್ಡಿ ತಡೆಯುವ ಸಾಮರ್ಥ್ಯ ಮನೆಗಳ, ಕಟ್ಟಡಗಳ ತಳಹದಿಗೆ ಇರಬೇಕು.
ಆದರೆ, ಅಂತಹ ಸಾಮರ್ಥ್ಯ ಬಹುತೇಕ ಕಟ್ಟಡಗಳಿಗೆ ಇಲ್ಲ. ಅಂತರ್ಜಲ ಮಟ್ಟದ ಹೆಚ್ಚಳ ವೇಗ ಪಡೆದಂತೆ ಸೋರಿಕೆಯಾಗಿ ಅಡಿಪಾಯ ದುರ್ಬಲಗೊಳ್ಳುತ್ತವೆ. 100 ಅಡಿಗೆ ನೀರು ಸಿಗುತ್ತಿದ್ದ ನೆಲದಲ್ಲಿ ದಿಢೀರ್ ಹತ್ತೇ ಹತ್ತು ಅಡಿಗೆ ನೀರು ಸಿಗುವಂತಾದರೆ ಪರಿಸ್ಥಿತಿ ಹೇಗಿರಬೇಡ? ಆದ್ದರಿಂದ ಕೇವಲ 3-4 ಅಡಿಗಳ ತಳಪಾಯ ಹಾಕಿ ನಿರ್ಮಿಸಿರುವ ಕಟ್ಟಡಗಳು, ಮನೆಗಳು ನೆಲಕ್ಕುರುಳುತ್ತಿವೆ.
ಕಳೆದೆರಡು ದಿನದಲ್ಲಿ ಕುಸಿದ ಮನೆಗಳು
ಚಿಕ್ಕಬಳ್ಳಾಪುರ : 550
ಕೋಲಾರ : 370
ಬೆಂ.ಗ್ರಾಮಾಂತರ : 326
ತುಮಕೂರು : 310
ರಾಮನಗರ : 70


Share this Story:

Follow Webdunia kannada

ಮುಂದಿನ ಸುದ್ದಿ

ಒಂದೂವರೆ ಗಂಟೆಗೆ ಅಂತ್ಯಗೊಂಡ ಹ್ಯಾರಿಸ್ ಅಧ್ಯಕ್ಷಗಿರಿ! ಮುಂದೇನಾಯ್ತು?