ಸ್ಲಂ ನಿವಾಸಿಗಳಿಗೆ ಮನೆ ವಿತರಿಸಲು ಆಗ್ರಹ ..!!!
ಬೆಂಗಳೂರು , ಬುಧವಾರ, 10 ನವೆಂಬರ್ 2021 (18:00 IST)
ನೆತ್ತಿಗೊಂದು ಸೂರಿಗಾಗಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡುಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಮೂಲನಿವಾಸಿ ಮಹಾ ಒಕ್ಕೂಟ ಪ್ರತಿಭಟನೆ ನಡೆಸಿತು. ಮೂಲನಿವಾಸಿ ಮಹಾ ಒಕ್ಕೂಟ ರಾಜ್ಯಾಧ್ಯಕ್ಷರಾದ ಜಿಗಣಿ ಶಂಕರ್,ಮುನಿಆಂಜಿನಪ್ಪ,ರೇವತಿ ರಾಜ್,ಎ.ಜೆ.ಖಾನ್, ಪಿ.ಜಾರ್ಜ್,ಆರ್.ಗೋವಿಂದಸ್ವಾಮಿ,ಭಾನುಪ್ರಕಾಶ್,ಲೋಕೇಶ್ವಂದ್ರ ಸೇರಿದಂತೆ ಒಕ್ಕೂಟದ ನೂರಾರು ಕಾರ್ಯಕರ್ತರು ಪ್ರತಿಭಟನಯಲ್ಲಿ ಪಾಲ್ಗೊಂಡಿದ್ದರು.ತಲತಲಾಂತರದಿಂದ ಕೊಳಗೇರಿ, ಸ್ಲಂಗಳಲ್ಲಿ ವಾಸಿಸುತ್ತಿದ್ದಾರೆ. ಅವರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅರ್ಹ ಫಲಾನುಭವಿಗಳು ಬಿ.ಡಿ.ಎ. 20×30 ಅಳತೆಯ ನಿವೇಶನ ಪಡೆಯಲು ಅರ್ಜಿ ಸಲ್ಲಿಸಿದ್ದೇವೆ. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ನಿವೇಶನ ನೀಡುವ ಯೋಜನೆಯಡಿ ಜಮೀನು ಮೀಸಲಿಟ್ಟು ನಿವೇಶನ ಹಂಚಿಕೆ ಮಾಡಲು ಯೋಜನೆಯನ್ನು ರೂಪಿಸಬೇಕಾಗಿದೆ. ವಸತಿಹೀನರಿಗೆ ನಿವೇಶನದ ಅವಶ್ಯಕತೆ ಇದ್ದು, ಇದನ್ನು ಮುಖ್ಯ ಆದ್ಯತೆ ಎಂದು ತಿಳಿಯದೆ, ನಮ್ಮನ್ನು ಮನುಷ್ಯರೆಂದು ನೋಡದೆ. ನಮ್ಮನ್ನಾಳಿದ ಸರಕಾರಗಳು ಪರಿಗಣಿಸದ ಕಾರಣ, ಈ ಸಮಸ್ಯೆ ಇನ್ನೂ ಜೀವಂತವಾಗಿದೆ ಎಂದಿದ್ದಾರೆ. ಬಿಡಿಎ ಎಂದರೆ ಸಿರಿವಂತರ, ಹಣವುಳ್ಳವರ, ಅಧಿಕಾರ ಇರುವವರ, ರಾಜಕೀಯದವರ ಕಚೇರಿಯಾಗಿದೆ ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ. ಇವತ್ತಿಗೂ ಕೂಡ ಬಿ.ಡಿ.ಎ. ಯೋಜನೆಗಳಾಗಲಿ, ಕಾರ್ಯವೈಖರಿಯಾಗಲೀ, ಜನಸಾಮಾನ್ಯರಿಗೆ ತಿಳಿಯಲು ಸಾಧ್ಯವಿಲ್ಲದ ಪರಿಸ್ಥಿತಿ ಹಾಗೂ ವ್ಯವಸ್ಥೆ ಎಲ್ಲರಿಗೂ ತಿಳಿದಿರುವಂಥಹದ್ದು ಎಂದರು.
ಮುಂದಿನ ಸುದ್ದಿ