Select Your Language

Notifications

webdunia
webdunia
webdunia
webdunia

ನಗರದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಗಳು ಕುಸಿತ

webdunia
bangalore , ಭಾನುವಾರ, 17 ಅಕ್ಟೋಬರ್ 2021 (16:35 IST)
ನಗರದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಗಳು ಕುಸಿತಿದೆ. ನಿನ್ನೆ ಸುರಿದ  ಬಾರೀ ಮಳೆಯಿಂದಾಗಿ ರಾಜಾಜಿನಗರ ಸಮೀಪದ ದಯಾನಗರ ವಾರ್ಡ್ ನಲ್ಲಿ ಮನೆ ಕುಸಿದಿದೆ. 60 ವರ್ಷದ ಹಳೆಯ ಮನೆ ಇದ್ದಾಗಿದ್ದು,  30 ವರ್ಷದಿಂದ 6 ಜನರಿರುವ ಅವಿಭಕ್ತ ಕುಟುಂಬ ವಾಸವಿತ್ತು. ಆದ್ರೆ ಏಕಾಏಕಿ ರಾತ್ರೋರಾತ್ರಿ ಮನೆ ಕುಸಿತಕೊಳ್ಳಗಾಗಿ ಮನೆಯ ಮಂದಿ ಬೀದಿಗೆ ಬೀಳುವಂತೆಯಾಗಿದೆ.  ನಿನ್ನೆ ಸುರಿದ ಮಳೆಯಿಂದಾಗಿ ಆಂಚಿನ ಮನೆ ಕುಸಿದಿದ್ದು, ಸದ್ಯ ಅದೃಷ್ಟವಶಾತ್ ಅವಘಡದಿಂದ  ಕುಟುಂಬ ಪಾರಗಿದೆ. ಇನ್ನೂ ಸ್ಥಳಕ್ಕೆ ಶಾಸಕ ಸುರೇಶ್ ಕುಮಾರ್  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಮನೆ ಕಟ್ಟಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ಮನೆಯ ನಿವಾಸಿಗಳಿಗೆ ಉಳಿದುಕೊಳ್ಳಲು ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ  ಆಶ್ರಯದ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದು . ಜೊತೆಗೆ ಊಟದ ವ್ಯವಸ್ಥೆಯನ್ನ ಕೂಡ ಮಾಡಿಕೊಟ್ಟಿದ್ದಾರೆ.. ಇನ್ನೂ ಶಾಸಕರು ಭರವಸೆಕೊಟ್ಟಂತೆ ಮನೆ ಕಟ್ಟಿಕೊಡ್ತಾರಾ ಇಲ್ಲ ಆಶ್ವಾಸನೆಯಂತೆ ಬಾಯಿಮಾತಿಗೆ ಉಳಿದುಬಿಡುತ್ತಾ ? ಎಂಬುದನ್ನ ನೋಡಬೇಕಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದಿಂದ " ಮನೆ ಬಾಗಿಲಿಗೆ ರೇಷನ್ " ಯೋಜನೆ