Select Your Language

Notifications

webdunia
webdunia
webdunia
webdunia

ಗುಡ್‌ನ್ಯೂಸ್: ಭಾರತೀಯರಿಗೆ ವೀಸಾ ಶುಲ್ಕ ಕಡಿತ

ಗುಡ್‌ನ್ಯೂಸ್: ಭಾರತೀಯರಿಗೆ ವೀಸಾ ಶುಲ್ಕ ಕಡಿತ
ನವದೆಹಲಿ , ಭಾನುವಾರ, 9 ಅಕ್ಟೋಬರ್ 2022 (06:36 IST)
ಮುಂಬೈ : ಭಾರತೀಯ ನಾಗರಿಕರಿಗೆ ವೀಸಾಗಳ ಶುಲ್ಕ ಕಡಿತಗೊಳಿಸಿರುವುದಾಗಿ ಮುಂಬೈನಲ್ಲಿರುವ ಜರ್ಮನ್ ರಾಯಭಾರ ಕಚೇರಿಯು ಘೋಷಿಸಿದೆ.
 
ಹೊಸ ನಿಯಮಗಳ ಅನ್ವಯ ಭಾರತೀಯರಿಗೆ ಅಲ್ಪಾವಧಿ ವೀಸಾ ಹಾಗೂ ನ್ಯಾಷನಲ್ ವೀಸಾಗಳ ಶುಲ್ಕವನ್ನು ಕಡಿಮೆ ಮಾಡಿದೆ. ಅಲ್ಪಾವಧಿ ಹಾಗೂ ನ್ಯಾಷನಲ್ ವೀಸಾಗಳು ಗರಿಷ್ಠ 90 ದಿನಗಳ ವರೆಗೆ ಉಳಿಯಲು ಅನುಮತಿಸುತ್ತದೆ.

ಅಲ್ಪಾವಧಿ ವೀಸಾಗೆ ವಯಸ್ಕರಿಗೆ 6,400 ರೂ.(80 ಡಾಲರ್), ಅಪ್ರಾಪ್ತರಿಗೆ 3,200 ರೂ. (40 ಡಾಲರ್) ಇರಲಿದ್ದು, ನ್ಯಾಷನಲ್ ವೀಸಾಕ್ಕೆ ವಯಸ್ಕರಿಗೆ 6 ಸಾವಿರ ರೂ (75 ಡಾಲರ್) ಹಾಗೂ ಅಪ್ರಾಪ್ತರಿಗೆ 3 ಸಾವಿರ ರೂ. (37.50 ಡಾಲರ್) ಗಳಷ್ಟು ಶುಲ್ಕ ಇರಲಿದೆ ಎಂದು ರಾಯಭಾರ ಕಚೇರಿ ಹೇಳಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಟಿಪ್ಪು ಎಕ್ಸ್ಪ್ರೆಸ್ ಹೆಸರು ಬದಲಾವಣೆ ಗೆ ವಾಟಾಳ್ ಕಿಡಿ