Select Your Language

Notifications

webdunia
webdunia
webdunia
webdunia

ವೀಸಾ ನೀಡಲು ಮುಂದಾದ ಚೀನಾ

ವೀಸಾ ನೀಡಲು ಮುಂದಾದ ಚೀನಾ
ಬೀಜಿಂಗ್ , ಬುಧವಾರ, 24 ಆಗಸ್ಟ್ 2022 (08:40 IST)
ಬೀಜಿಂಗ್ : ಕೊನೆಗೂ 2 ವರ್ಷಗಳ ನಂತರ ಭಾರತದ ವಿದ್ಯಾರ್ಥಿಗಳಿಗೆ ವೀಸಾ ನೀಡಲು ಚೀನಾ ನಿರ್ಧರಿಸಿದೆ.

ಕೋವಿಡ್ ಹೆಚ್ಚಳವಾದ ಕಾರಣದಿಂದಾಗಿ ಚೀನಾ ಭಾರತದ ವಿದ್ಯಾರ್ಥಿಗಳಿಗೆ ವೀಸಾ ನೀಡಲು ನಿರ್ಬಂಧ ವಿಧಿಸಿತ್ತು. ಸದ್ಯ ಚೀನಾದ ಕಾಲೇಜುಗಳಿಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ಮತ್ತು ತಮ್ಮ ಅಧ್ಯಯನವನ್ನು ಪುನರಾರಂಭಿಸಲು,

ಚೀನಾಕ್ಕೆ ಹಿಂದಿರುಗುವ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ಶೈಕ್ಷಣಿಕ ಶಿಕ್ಷಣಕ್ಕಾಗಿ ದೀರ್ಘಾವಧಿಯ ಅಧ್ಯಯನ ಕೈಗೊಳ್ಳಲು ಚೀನಾಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಘಿ1-ವೀಸಾ ನೀಡಲು ನಿರ್ಧರಿಸಿದೆ. 

ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಏಷ್ಯನ್ ವ್ಯವಹಾರಗಳ ಇಲಾಖೆಯ ಕೌನ್ಸಿಲರ್ ಜಿ ರಾಂಗ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಭಾರತೀಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು, ನಿಮ್ಮ ತಾಳ್ಮೆಯು ಸಾರ್ಥಕವಾಗಿದೆ. ನಾನು ನಿಜವಾಗಿಯೂ ನಿಮ್ಮ ಉತ್ಸಾಹ ಮತ್ತು ಸಂತೋಷವನ್ನು ಹಂಚಿಕೊಳ್ಳಬಲ್ಲೆ. ಚೀನಾಗೆ ಮರಳಿ ಸ್ವಾಗತ ಎಂದು ಟ್ವೀಟ್ ಮಾಡಿದ್ದಾರೆ.

ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಚೀನಾದಲ್ಲಿ ಕೆಲಸ ಮಾಡುವವರ ಕುಟುಂಬಗಳಿಗೆ ವೀಸಾಗಳನ್ನು ನೀಡುವ ಸಲುವಾಗಿ ನವದೆಹಲಿಯಲ್ಲಿರುವ ಚೀನಾ ರಾಯಭಾರಿ ಕಚೇರಿಯ ಪ್ರಕಟಣೆಯನ್ನು ಅವರ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಈ ಬಾರಿ ಅದ್ಧೂರಿ ಗಣೇಶೋತ್ಸವಕ್ಕೆ ತಯಾರಿ ಶುರು