Publish Date: Mon, 22 Aug 2022 (16:05 IST)
Updated Date: Mon, 22 Aug 2022 (16:07 IST)
ಹರಾರೆ: ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಶುಬ್ನಂ ಗಿಲ್ ಚೊಚ್ಚಲ ಶತಕ ಸಿಡಿಸಿದ್ದಾರೆ.
ಇತ್ತೀಚೆಗಿನ ವರದಿ ಬಂದಾಗ ಭಾರತ 5 ವಿಕೆಟ್ ನಷ್ಟಕ್ಕೆ 47 ಓವರ್ ಗಳಲ್ಲಿ 264 ರನ್ ಗಳಿಸಿದೆ. ಗಿಲ್ 89 ಎಸೆತಗಳಿಂದ 118 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇದಕ್ಕೆ ಮೊದಲು ಆರಂಭಿಕರಾಗಿ ಕಣಕ್ಕಿಳಿದಿದ್ದ ಶಿಖರ್ ಧವನ್ 40, ಕೆಎಲ್ ರಾಹುಲ್ 30 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಬಳಿಕ ಇಶಾನ್ ಕಿಶನ್ 50 ರನ್ ಗಳಿಸಿ ರನೌಟ್ ಆದರು. ದೀಪಕ್ ಹೂಡಾ ಕೇವಲ 1 ಮತ್ತು ಸಂಜು ಸ್ಯಾಮ್ಸನ್ 15 ರನ್ ಗೆ ವಿಕೆಟ್ ಒಪ್ಪಿಸಿದರು.