ಹರಾರೆ: ಭಾರತ ಮತ್ತು ಜಿಂಬಾಬ್ವೆ ನಡುವೆ ಇಂದು ಅಂತಿಮ ಮತ್ತು ಮೂರನೇ ಏಕದಿನ ಪಂದ್ಯ ನಡೆಯಲಿದೆ.
ಈಗಾಗಲೇ ಟೀಂ ಇಂಡಿಯಾ 2-0 ಅಂತರದಿಂದ ಸರಣಿ ಗೆದ್ದಿರುವುದರಿಂದ ಈ ಪಂದ್ಯ ಔಪಚಾರಿಕವಾಗಲಿದೆ. ಹಾಗಿದ್ದರೂ ಮುಂಬರುವ ಏಷ್ಯಾ ಕಪ್, ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಕೆಎಲ್ ರಾಹುಲ್ ಪಡೆಗೆ ಪ್ರಯೋಗ ಮಾಡಲು ವೇದಿಕೆ ಸಿಕ್ಕಂತಾಗಲಿದೆ.
ದ್ವಿತೀಯ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದರೂ ವಿಫಲರಾಗಿದ್ದರು. ಹಾಗಿದ್ದರೂ ಏಷ್ಯಾ ಕಪ್ ಗೆ ಲಯ ಕಂಡುಕೊಳ್ಳುವ ನಿಟ್ಟಿನಿಂದ ಅವರೇ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಉಳಿದಂತೆ ತಂಡದಲ್ಲಿ ಕೆಲವೊಂದು ಬದಲಾವಣೆ ನಿರೀಕ್ಷಿಸಬಹುದು. ಈ ಪಂದ್ಯ ಮಧ‍್ಯಾಹ್ನ 12.45 ಕ್ಕೆ ಆರಂಭವಾಗಲಿದೆ.