Publish Date: Sat, 20 Aug 2022 (08:10 IST)
Updated Date: Sat, 20 Aug 2022 (09:11 IST)
ಹರಾರೆ: ಭಾರತ ಮತ್ತು ಜಿಂಬಾಬ್ವೆ ದ್ವಿತೀಯ ಏಕದಿನ ಇಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ.
ಮೊದಲ ಪಂದ್ಯದಲ್ಲಿ ಭಾರತ ನಿರಾಯಾಸವಾಗಿ 10 ವಿಕೆಟ್ ಗಳ ಭರ್ಜರಿ ಗೆಲುವು ಕಂಡಿತ್ತು. ದುರ್ಬಲ ಎದುರಾಳಿ ಜಿಂಬಾಬ್ವೆ ಯಾವುದೇ ಹಂತದಲ್ಲೂ ಕೆಎಲ್ ರಾಹುಲ್ ನೇತೃತ್ವದ ಪ್ರತಿಭಾವಂತರ ಪಡೆಗೆ ಸವಾಲೇ ಆಗಲಿಲ್ಲ.
ಮೊದಲ ಏಕದಿನ ಪಂದ್ಯದಲ್ಲಿ ಬಹಳ ದಿನಗಳ ನಂತರ ತಂಡಕ್ಕೆ ಬಂದ ಕೆಎಲ್ ರಾಹುಲ್ ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಶುಬ್ನಂ ಗಿಲ್ ಗಾಗಿ ರಾಹುಲ್ ತಮ್ಮ ಆರಂಭಿಕ ಸ್ಥಾನ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ಏಷ್ಯಾ ಕಪ್ ದೃಷ್ಟಿಯಿಂದ ಬ್ಯಾಟಿಂಗ್ ಅಭ್ಯಾಸವಾಗಲು ರಾಹುಲ್ ಆರಂಭಿಕರಾಗಿ ಕಣಕ್ಕಿಳಿದರೂ ಅಚ್ಚರಿಯಿಲ್ಲ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ‍್ಯತೆ ಕಡಿಮೆ. ಈ ಪಂದ್ಯ ಮಧ್ಯಾಹ್ನ 12.45 ಕ್ಕೆ ಆರಂಭವಾಗಲಿದೆ.