Select Your Language

Notifications

webdunia
webdunia
webdunia
webdunia

ಯಜುವೇಂದ್ರ ಚಾಹಲ್ ರನ್ನು ಬಳಸಿ ಬಿಸಾಕಿದ್ರು ಧನಶ್ರೀ ವರ್ಮಾ! ನೆಟ್ಟಿಗರಿಂದ ಟ್ರೋಲ್

ಯಜುವೇಂದ್ರ ಚಾಹಲ್ ರನ್ನು ಬಳಸಿ ಬಿಸಾಕಿದ್ರು ಧನಶ್ರೀ ವರ್ಮಾ! ನೆಟ್ಟಿಗರಿಂದ ಟ್ರೋಲ್
ಮುಂಬೈ , ಶುಕ್ರವಾರ, 19 ಆಗಸ್ಟ್ 2022 (08:50 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೇ ನೆಟ್ಟಿಗರು ಧನಶ್ರೀಯನ್ನು ಟ್ರೋಲ್ ಮಾಡಿದ್ದಾರೆ.

ಚಾಹಲ್ 2020 ರಲ್ಲಿ ಯೂ ಟ್ಯೂಬರ್, ಕೊರಿಯಾಗ್ರಫರ್ ಧನಶ್ರೀ ವರ್ಮಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಪರಸ್ಪರ ಪ್ರೀತಿಸಿ ಇಬ್ಬರೂ ಮದುವೆಯಾಗಿದ್ದರು. ನಿನ್ನೆ ಇದ್ದಕ್ಕಿದ್ದಂತೆ ಅವರ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ವೈರಲ್ ಆಗಿತ್ತು. ಕೊನೆಗೆ ಇಬ್ಬರೂ ಸಾಮಾಜಿಕ ಜಾಲತಾಣದ ಮೂಲಕ ಇದನ್ನೆಲ್ಲಾ ನಂಬಬೇಡಿ ಎಂದು ಸ್ಪಷ್ಟನೆಯನ್ನೂ ಕೊಟ್ಟರು.

ಆದರೆ ನೆಟ್ಟಿಗರು ಮಾತ್ರ ಧನಶ್ರೀ ವರ್ಮಾರನ್ನು ಟ್ರೋಲ್ ಮಾಡಿದ್ದು, ಯಜುವೇಂದ್ರ ಚಾಹಲ್ ರನ್ನು ಖ್ಯಾತ ಕ್ರಿಕೆಟಿಗ ಎಂಬ ಕಾರಣಕ್ಕೆ ಧನಶ್ರೀ ಮದುವೆಯಾಗಿ ತಾವೂ ಹೆಸರು ಮಾಡಿದ ಮೇಲೆ ಕೈ ಬಿಟ್ಟಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕದಿನ ಕ್ರಿಕೆಟ್ ನಾಶವಾಗುತ್ತಾ? ಮತ್ತೆ ಕಪಿಲ್ ವರ್ಸಸ್ ರೋಹಿತ್ ಶರ್ಮಾ!