Publish Date: Fri, 19 Aug 2022 (09:10 IST)
Updated Date: Fri, 19 Aug 2022 (09:17 IST)
ಹರಾರೆ: ಭಾರತ ಮತ್ತು ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಕೈಗೆ ಚೆಂಡೇಟಾಗಿದೆ.
ಬ್ಯಾಟಿಂಗ್ ಮಾಡುತ್ತಿದ್ದಾಗ ಹೊಡೆಯಲೆತ್ನಿಸಿ ಬಾಲ್ ಶಿಖರ್ ಮೊಣಕೈಗೆ ತಗುಲಿದೆ. ತಕ್ಷಣವೇ ನೋವಿನಿಂದ ಕೈ ಕೊಡವಿಕೊಂಡ ಧವನ್ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಆದರೆ ಪಂದ್ಯ ಮುಗಿದ ಮೇಲೆ ನೋಡಿದಾಗ ಅವರ ಕೈ ಬಾತುಕೊಂಡಿದೆ. ಕೈ ಊದಿಕೊಂಡಿರುವ ಫೋಟೋ ಹಂಚಿಕೊಂಡಿರುವ ಧವನ್, ನಿಮಗೂ ಈ ರೀತಿ ಕೈಯಲ್ಲಿ ಬಾಲ್ ಆಗುತ್ತದೆಯೇ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಅವರ ಗಾಯ ಗಂಭೀರವಲ್ಲ ಎನ್ನುವುದು ಸಮಾಧಾನಕರ ಅಂಶ.