Publish Date: Mon, 22 Aug 2022 (09:20 IST)
Updated Date: Mon, 22 Aug 2022 (09:36 IST)
ಮುಂಬೈ: ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್-ಧನಶ್ರೀ ವರ್ಮಾ ಪರಸ್ಪರ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇಬ್ಬರೂ ಸಾಮಾಜಿಕ ಜಾಲತಾಣದ ಮೂಲಕ ಇದೆಲ್ಲಾ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದರು.
ಇದೀಗ ಧನಶ್ರೀ ವರ್ಮ ತಮ್ಮ ಜೀವನದಲ್ಲಿ ನಡೆದಿರುವ ನೋವಿನ ವಿಚಾರವೇನೆಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಡ್ಯಾನ್ಸ್ ಮಾಡುವಾಗ ಬಿದ್ದು ಮಂಡಿಗೆ ಏಟು ಮಾಡಿಕೊಂಡಿದ್ದೆ. ಹೀಗಾಗಿ ಮಂಡಿ ಶಸ್ತ್ರಚಿಕಿತ್ಸೆಗೊಳಗಾಗಬೇಕಾಯಿತು. ಈ ನಡುವೆ ನಮ್ಮ ವೈವಾಹಿಕ ಜೀವನದ ಬಗ್ಗೆ ಬಂದ ವದಂತಿಗಳು ನನಗೆ ಆಘಾತ ಕೊಟ್ಟಿತು. ಅದಕ್ಕಿಂತ ಹೆಚ್ಚಾಗಿ ಇಂತಹದ್ದೊಂದು ಸುದ್ದಿ ಬರುತ್ತಿದ್ದಂತೇ ಜನ ನನ್ನನ್ನೇ ಟಾರ್ಗೆಟ್ ಮಾಢಿದ್ದು ನನಗೆ ಇನ್ನಷ್ಟು ಸಂಕಟ ತಂದಿತು. ಆದರೆ ಇದೆಲ್ಲದರಿಂದ ನಾನು ಇನ್ನಷ್ಟು ಸ್ಟ್ರಾಂಗ್ ಆಗಲು ನನಗೆ ಪಾಠ ಸಿಕ್ಕಿತು. ಅದಕ್ಕೆ ಎಲ್ಲರಿಗೂ ನಾನು ಧನ್ಯವಾದ ಹೇಳಲೇಬೇಕು ಎಂದು ಸುದೀರ್ಘ ಪೋಸ್ಟ್ ಮೂಲಕ ಮನದಾಳ ಹಂಚಿಕೊಂಡಿದ್ದಾರೆ.