Select Your Language

Notifications

webdunia
webdunia
webdunia
webdunia

ಚಲನಚಿತ್ರ ನಗರಿ ರಾಮೋಜಿ ಫಿಲಂ ಸಿಟಿ ಓಪನ್

ಚಲನಚಿತ್ರ ನಗರಿ ರಾಮೋಜಿ ಫಿಲಂ ಸಿಟಿ ಓಪನ್
ಬೆಂಗಳೂರು , ಬುಧವಾರ, 6 ಅಕ್ಟೋಬರ್ 2021 (14:30 IST)
ಬೆಂಗಳೂರು : ಕರೊನಾ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ವಿಶ್ವದ ಅತಿ ದೊಡ್ಡ ಚಲನಚಿತ್ರ ನಗರಿ ರಾಮೋಜಿ ಫಿಲಂ ಸಿಟಿ ಶುಕ್ರವಾರ (ಅ.8) ತೆರೆಯಲಿದೆ.

ಪ್ರವಾಸಿಗರಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಕರೊನಾ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಭಯ, ಆತಂಕವಿಲ್ಲದೆ ಪ್ರವಾಸಿಗರು ತಮ್ಮ ಕುಟುಂಬ ಸಮೇತ ಬಂದು ಸಮಯ ಕಳೆಯಬಹುದು.
ಮುತ್ತಿನ ನಗರಿ ಹೈದರಾಬಾದ್ನ 2 ಸಾವಿರ ಎಕರೆಯಲ್ಲಿರುವ ರಾಮೋಜಿ ಫಿಲಂ ಸಿಟಿಯಲ್ಲಿ ಸಿನಿ ಮ್ಯಾಜಿಕ್, ಉದ್ಯಾನ, ಚಿಮ್ಮುವ ಕಾರಂಜಿ, ಮಕ್ಕಳ ಮನಸ್ಸಿಗೆ ಮುದ ನೀಡುವ ನಾನಾ ಆಟಗಳು, ಸುಸಜ್ಜಿತ ರೆಸ್ಟೋರೆಂಟ್, ಫುಡ್ ಕೋರ್ಟ್, ಬಾಹುಬಲಿ ಚಿತ್ರದ ಭವ್ಯವಾದ ಸೆಟ್ಗಳು ನೋಡುಗರ ಆಕರ್ಷಣೆ ಕೇಂದ್ರವಾಗಿದೆ. ಪ್ರತಿ ಬಜೆಟ್ಗೆ ಅನುಗುಣವಾಗಿ ಉಳಿದುಕೊಳ್ಳಲು ಆಯ್ಕೆಗಳಿವೆ. ರಜೆ ಹಾಗೂ ವಿಶೇಷ ದಿನಗಳಲ್ಲಿ ಪ್ರವಾಸಿಗರು ಇಲ್ಲಿಗೆ ಬಂದು ಸಮಯ ಕಳೆಯಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಚಾಮರಾಜನಗರಕ್ಕೆ ಸಿಎಂ ಭೇಟಿ