Publish Date: Mon, 03 Oct 2022 (08:32 IST)
Updated Date: Mon, 03 Oct 2022 (08:33 IST)
ಉಡುಪಿ : ಕಲ್ಲಿದ್ದಲಿನ ಬೆಲೆಯ ಹೊಂದಾಣಿಕೆ ಮಾಡಲು ಕಾಂಗ್ರೆಸ್ ಸರ್ಕಾರ 2014ರಲ್ಲಿ ರೂಪಿಸಿದ್ದ ನಿಯಮಾವಳಿಗಳನ್ನು ತೆಗೆದುಹಾಕುತ್ತೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಬಿಗ್ ಬುಲೆಟಿನ್ ನಲ್ಲಿ ರಾಜ್ಯದ ವಿದ್ಯುತ್ ದರ ಏರಿಕೆ, ಜನಸಾಮಾನ್ಯರ ಮೇಲಿನ ಕರೆಂಟ್ ಬಿಲ್ ಬರೆ, ವಿದ್ಯುತ್ ಸೋರಿಕೆ, ಕಳ್ಳತನ ಬಗ್ಗೆ ಕ್ರಮ ಕೈಗೊಳ್ಳದವರ ವಿರುದ್ಧ ಚಾಟಿ ಬೀಸಲಾಗಿತ್ತು.
ಕಾಂಗ್ರೆಸ್ ತಂದ ಈ ಪದ್ಧತಿಯಿಂದ ಜನರಿಗೆ ಹೊರೆಯಾಗುತ್ತಿದೆ. ಸಾಧಕ ಬಾಧಕ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ಅಗತ್ಯ ಬಿದ್ದರೆ ಈ ನಿಯಮಾವಳಿ ಹಿಂದಕ್ಕೆ ಪಡೆಯಲು ಹಿಂಜರಿಯುವುದಿಲ್ಲ. ಹಿಂದಿನ ನಿಯಮಾವಳಿಯೇ ಮುಂದುವರಿಯುತ್ತಿದೆ.