ಮುಂಬೈ: ಒಂದು ಕಾಲದಲ್ಲಿ ಪ್ರೇಮಿಗಳಾಗಿ ಬ್ರೇಕಪ್ ಆಗಿದ್ದ ಸಲ್ಮಾನ್ ಖಾನ್-ಐಶ್ವರ್ಯಾ ರೈ ಈಗಲೂ ಒಬ್ಬರನ್ನೊಬ್ಬರನ್ನು ಭೇಟಿಯಾಗುವುದೇ ಇಲ್ಲ.
ಈಗಲೂ ಐಶ್ವರ್ಯಾಗೆ ಸಲ್ಮಾನ್ ಎಂದರೆ ಭಯವಿದೆಯಂತೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ ಐಶ್ವರ್ಯಾ ಕಪಿಲ್ ಶರ್ಮಾ ಶೋಗೆ ಗೈರು ಹಾಜರಾಗಿದ್ದು. ಪೊನ್ನಿಯನ್ ಸೆಲ್ವನ್ 1 ಸಿನಿಮಾ ಪ್ರಚಾರಕ್ಕಾಗಿ ಇಡೀ ಚಿತ್ರತಂಡ ಕಪಿಲ್ ಶರ್ಮಾ ಶೋಗೆ ಬಂದಿತ್ತು.
ಆದರೆ ಐಶ್ವರ್ಯಾ ಮಾತ್ರ ಬಂದಿರಲಿಲ್ಲ. ಇದಕ್ಕೆ ಕಾರಣ ಸಲ್ಮಾನ್ ಈ ಶೋನ ನಿರ್ಮಾಪಕರಲ್ಲೊಬ್ಬರು ಎನ್ನುವುದು ಎನ್ನಲಾಗಿದೆ. ಹೀಗಾಗಿ ಸಲ್ಮಾನ್ ನೆರಳಿನಿಂದಲೂ ಐಶ್ವರ್ಯಾ ದೂರವಿರುತ್ತಾರೆ ಎನ್ನಲಾಗಿದೆ
-Edited by Rajesh Patil