ಮುಂಬೈ: ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದಲ್ಲಿ ಸಾಮಿ ಸಾಮಿ ಹಾಡಿಗೆ ಹಾಕಿದ್ದ ಸ್ಟೆಪ್ಸ್ ಭಾರೀ ವೈರಲ್ ಆಗಿತ್ತು.
ಇದೀಗ ಖಾಸಗಿ ಅವಾರ್ಡ್ ಸಮಾರಂಭವೊಂದರಲ್ಲಿ ರಶ್ಮಿಕಾ ಜೊತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಇದೇ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋವೊಂದು ವೈರಲ್ ಆಗಿದೆ.
ಸಲ್ಮಾನ್ ಖಾನ್ ಕೈಯಿಂದ ಯೂಥ್ ಐಕಾನ್ ಪ್ರಶಸ್ತಿ ಪಡೆದ ರಶ್ಮಿಕಾ ಬಳಿಕ ಪುಷ್ಪ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಲ್ಮಾನ್ ಜೊತೆಗೆ ವೇದಿಕೆಯಲ್ಲಿದ್ದ ಇತರರೂ ಹೆಜ್ಜೆ ಹಾಕಿದ್ದಾರೆ.