Publish Date: Thu, 18 Aug 2022 (09:52 IST)
Updated Date: Thu, 18 Aug 2022 (09:59 IST)
ಮಡಿಕೇರಿ : ಕೆಲ ತಿಂಗಳ ಹಿಂದೆ ಸರಣಿ ಭೂಕಂಪನದ ಅನುಭವಾಗಿದ್ದ ಕೊಡಗು ಹಾಗೂ ದಕ್ಷಿಣ ಕನ್ನಡದ ಗಡಿಭಾಗದಲ್ಲಿ ಇಂದು ಮತ್ತೆ ಭೂಮಿ ಕಂಪಿಸಿದೆ.
ಭಾರಿ ಶಬ್ದದೊಂದಿಗೆ ಭೂಕಂಪನದ ಅನುಭವ ಗಡಿಭಾಗದ ಜನರಿಗೆ ಇಂದು ಸಂಜೆ 6:20ರ ಸಮಯಕ್ಕೆ ಆಗಿದೆ. ಕೊಯನಾಡಿನ ಮಂಗಳಪಾರೆ ಬಳಿ ಮತ್ತು ಸುಳ್ಯ ಭಾಗದ ಹಲವು ಗ್ರಾಮಗಳಿಗೆ ಭೂಕಂಪನವಾಗಿದೆ. ಸ್ಥಳೀಯರು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ.
ಸುಳ್ಯದ ಕಲ್ಮಕಾರಿನ ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಶಬ್ದ ಹಾಗೂ ಕಂಪನ ಹೆಚ್ಚಾಗಿ ಅನುಭವವಾಗಿದೆ. ಕೊಲ್ಲಮೊಗ್ರದವರೆಗೂ ಈ ಶಬ್ದ ಕೇಳಿಸಿದೆ ಎನ್ನಲಾಗಿದೆ.
ಮಾತ್ರವಲ್ಲದೇ ಕಲ್ಲುಗುಂಡಿಯ ಚಟ್ಟೆಕಲ್ಲು, ಕೊಯನಾಡಿನ ಮಂಗಳಪಾರೆ ಎಂಬಲ್ಲಿ ಭೂಮಿ ಕಂಪಿಸಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.