ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದೆ.ಮಳೆ ಹೆಚ್ಚಾದಲ್ಲಿ ಭಾಗಮಂಡಲ ನಾಪೋಕ್ಲು ರಸ್ತೆ ಬಂದ್ ಆಗುವ ಸಾಧ್ಯತೆ ಇದೆ. ಸಾರ್ವಜನಿಕರಿಗೆ ಪರ್ಯಾಯವಾಗಿ ಬೋಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಜೋಡು ಪಾಲದ ಬಳಿ ರಾಷ್ಟ್ರೀಯ ಹೆದ್ದಾರಿ 275 ಕ್ಕೆ ಗುಡ್ಡ ಕುಸಿದಿದೆ. ಇತ್ತ ಪದೇ ಪದೇ ಆಗುತ್ತಿರುವ ಭೂಕಂಪನದಿಂದ ಜಿಲ್ಲೆಯ ಜನ ಆರತಂಕಕ್ಕೀಡಾಗಿದ್ದಾರೆ. ಭಾರೀ ಮಳೆಯ ನಡುವೆಯೇ ಕೊಡಗು ಜಿಲ್ಲೆಯಲ್ಲಿ ಭೂಮಿ ಮತ್ತೆ ಕಂಪಿಸಿದೆ. ಕೊಡಗಿನ ಗಡಿ ಗ್ರಾಮ ಚೆಂಬು ಸುತ್ತ-ಮುತ್ತ ನಿವಾಸಿಗಳಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಬೆಳಗ್ಗೆ 6:24ರ ಸಮಯದಲ್ಲಿ ಜನರಿಗೆ ಈ ಅನುಭವವಾಗಿದೆ. ಶನಿವಾರ ರಾತ್ರಿ ಭೂಮಿಯಿಂದ ಜೋರು ಶಬ್ದ ಕೇಳಿಬಂದಿತ್ತು. ಜೊತೆಗೆ ಇಂದು ಬೆಳಗ್ಗೆ ಕೂಡ ಶಬ್ದದೊಂದಿಗೆ ಭೂಕಂಪನದ ಅನುಭವವಾಗಿದೆ ಎಂದು ಗ್ರಾಂಸ್ಥರು ಮಾಹಿತಿ ನೀಡಿದ್ದಾರೆ. ಈ ಮೂಲಕ ಸರಣಿ ಭೂಕಂಪನವಾಗಿದ್ದ ಗಡಿ ಗ್ರಾಮಗಳಲ್ಲಿ ಮತ್ತೆ ಆತಂಕ ಹೆಚ್ಚಾಗಿದೆ.ಗೂನಡ್ಕ, ಕೊಯಿನಾಡಿನಲ್ಲೂ ಭೂಕಂಪವಾದಂತಹ ಅನುಭವವಾಗಿದೆ. ಇದರಿಂದ ಚೆಂಬು ಸುತ್ತಮುತ್ತಲಿನ ಜನ ತೀವ್ರ ಆತಂಕ್ಕೀಡಾಗಿದ್ದಾರೆ.